ಅಕ್ರಮ ಖಾತೆ ಮಾಡಿದ ಆರೋಪ: ಬಿಬಿಎಂಪಿ ಐವರು ಅಧಿಕಾರಿಗಳು ಸಸ್ಪೆಂಡ್…. ಬೆಂಗಳೂರು,ಅ,10,2019(..): ಸ್ಟೆರ್ಲಿಂಗ್ ಪ್ರಾಪರ್ಟಿಸ್ ಗೆ ಅಕ್ರಮವಾಗಿ ಖಾತೆ ಮಾಡಿಕೊಟ್ಟ ಆರೋಪದ ಮೇಲೆ ಬಿಬಿಎಂಪಿಯ ಐವರು ಅಧಿಕಾರಿಗಳನ್ನ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. ಮಹಾದೇವಪುರದ ನಿಕಟಪೂರ್ವ ಜಂಟಿ ಆಯುಕ್ತ ಜಗದೀಶ್ ಸೇರಿದಂತೆ ಹಿಂದಿನ ಉಪ ಆಯುಕ್ತ ಶಿವೇಗೌಡ, ಕಂದಾಯಾಧಿಕಾರಿ ಕೆಂಪರಂಗಯ್ಯ, ಸಹಾಯಕ ಕಂದಾಯಾಧಿಕಾರಿ ದೊಡ್ಡಶಾಮಾಚಾರಿ, ಲೋಕೇಶ್ ಬಾಬು ಅಮಾನತುಗೊಂಡ ಅಧಿಕಾರಿಗಳು. ಅಕ್ರಮವಾಗಿ 35 ಎಕೆರೆಯಲ್ಲಿ ಸರ್ಕಾರಿ ಭೂಮಿ ಖಾತೆ ಮಾಡಿದ ಆರೋಪ ಕೇಳಿ ಬಂದ ಹಿನ್ನೆಲೆ, ಐವರು ಅಧಿಕಾರಿಗಳನ್ನ ಅಮಾನತು ಮಾಡಿ ಕಮಿಷನರ್ ಅನಿಲ್ ಕುಮಾರ್ ಆದೇಶ ಹೊರಡಿಸಿದ್ದಾರೆ. : – – - - -.