ಪಾಕಿಸ್ತಾನಕ್ಕೆ ಬಂದು ಆಡಿ: ಕೊಹ್ಲಿಗೆ ಆಹ್ವಾನ ನೀಡಿದ ಪಾಕ್ ಅಭಿಮಾನಿ ಬೆಂಗಳೂರು, ಅಕ್ಟೋಬರ್ 10, 2019 (..):ಟೀಂ ಇಂಡಿಯಾ ನಾಯಕ ವಿರಾಟ ಕೊಹ್ಲಿ ಅಭಿಮಾನಿಯೊಬ್ಬ ನೀವು ಪಾಕಿಸ್ತಾನಕ್ಕೆ ಬಂದು ಇಲ್ಲಿ ಆಡೋದನ್ನ ನಾವು ನೋಡಬೇಕು ಎಂದು ಕೊಹ್ಲಿಗೆ ಕೇಳಿಕೊಂಡಿದ್ದಾನೆ. ನಾವು ನಿಮ್ಮನ್ನ ತುಂಬಾ ಪ್ರೀತಿಸುತ್ತೇವೆ. ನಿಮ್ಮ ದೊಡ್ಡ ಫ್ಯಾನ್. ನೀವು ಪಾಕಿಸ್ತಾನದಲ್ಲಿ ಪಂದ್ಯವಾಡೋದನ್ನ ನೋಡಬೇಕು ಎಂದು ಬರೆದು ತನ್ನ ಫೋಟೋ ಹಾಕಿ, ಕೊಹ್ಲಿಗೆ ಟ್ಯಾಗ್ ಮಾಡಿದ್ದಾನೆ. ಈ ಪೋಸ್ಟ್​​ಗೆ ಟ್ವಿಟರ್​ ಬಳಕೆದಾರರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶ್ರೀಲಂಕಾ ಪಾಕಿಸ್ತಾನ ಮ್ಯಾಚ್ ನಡೆಯುತ್ತಿದ್ದ ವೇಳೆ ಅಭಿಮಾನಿ ಇಂಥದ್ದೊಂದು ಫೋಟೋ ತೆಗೆಸಿಕೊಂಡಿದ್ದಾನೆ.