ನಟಿ ಆಶಾ ಭಟ್ ಟ್ವಿಟ್ಟರ್​​ ಹಾಗೂ ಇನ್​ಸ್ಟಾಗ್ರಾಂ ಖಾತೆ ಹ್ಯಾಕ್ ಬೆಂಗಳೂರು, ಅಕ್ಟೋಬರ್, 2019 (..):ಆಶಾ ಭಟ್ ಸೈಬರ್​ ಕಳ್ಳರು ಶಾಕ್​ ನೀಡಿದ್ದಾರೆ. ಅವರ ಟ್ವಿಟ್ಟರ್​​ ಹಾಗೂ ಇನ್​ಸ್ಟಾಗ್ರಾಂ ಖಾತೆಯನ್ನು ಹ್ಯಾಕ್ ಮಾಡಲಾಗಿದೆ. ನಿನ್ನೆ, ಟರ್ಕಿ ಭಾಷೆಯಲ್ಲಿ ಆಶಾ ಭಟ್​ ಟ್ವಿಟ್ಟರ್​ ಖಾತೆಯಿಂದ ಟ್ವೀಟ್​ ಒಂದು ಹೊರ ಬಂದಿದೆ. ಅದರಲ್ಲಿ, ‘ದೆವ್ವ ಕೂಡ ಸಹಿ ಕೇಳುತ್ತದೆ’ ಎಂದು ಬರೆಯಲಾಗಿದೆ. ಅಲ್ಲದೆ ಟ್ವಿಟ್ಟರ್​ ಹ್ಯಾಕ್​ ಆಗಿದೆ ಎನ್ನುವ ಅರ್ಥ ಬರುವಂತೆಯೂ ಬರೆಯಲಾಗಿದೆ.