ಜಂಬೂ ಸವಾರಿ ಮೆರವಣಿಗೆ ವೇಳೆ ಕಣ್ಮನ ಸೆಳೆಯಲಿವೆ ಸ್ತಬ್ದಚಿತ್ರಗಳು… ಮೈಸೂರು,ಅ,8,2019(..): ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಜಂಬೂ ಸವಾರಿ ಮೆರವಣಿಗೆಯ ಪ್ರಮುಖ ಆಕರ್ಷಣೆ ಸ್ತಬ್ದ ಚಿತ್ರಗಳು. ಈ ಬಾರಿಯೂ ಸ್ತಬ್ದಚಿತ್ರಗಳು ಜನರ ಮನಸೂರೆಗೊಳಿಸಲು ಸಜ್ಜಾಗಿವೆ. ಕ್ಯಾಪ್ಟನ್ ಅರ್ಜುನ ಅಂಬಾರಿ ಹೊತ್ತು ಹೆಜ್ಜೆ ಹಾಕುವ ಮಾರ್ಗದಲ್ಲಿ ವಿವಿಧಬಗೆಯ ಸ್ತಬ್ದ ಚಿತ್ರಗಳು ಸಾಗಲಿವೆ. ಈ ಮೂಲಕ ಜಂಬೂ ಸವಾರಿ ವೀಕ್ಷಕರ ಕಣ್ಮನ ಸೆಳಯಲಿವೆ. ಈ ಬಾರಿ 30 ಜಿಲ್ಲೆಗಳಿಂದ ವಿವಿಧ ಬಗೆಯೆ 38ಸ್ತಬ್ದಚಿತ್ರಗಳನ್ನ ತಯಾರಿಸಲಾಗಿದ್ದು ಈಗಾಗಲೇ ಅರಮನೆ ಅಂಗಳಕ್ಕೆ ಸ್ತಬ್ದಚಿತ್ರಗಳು ಆಗಮಿಸಿವೆ. ರಾಜ್ಯದ ವಿವಿಧ ಜಿಲ್ಲೆಗಳಿಂದ 30ಸ್ತಬ್ದ ಚಿತ್ರಗಳು ತಯಾರಿಸಲಾಗಿದ್ದು , ಮೈಸೂರು ಜಿಲ್ಲಾಡಳಿತದಿಂದ 4 ಸ್ತಬ್ದ ಚಿತ್ರಗಳು ಹಾಗೂ ದಸರಾ ಉಪ ಸಮಿತಿಯಿಂದ 4ಸ್ತಬ್ದ ಚಿತ್ರಗಳು ಸೇರಿದಂತೆ ಒಟ್ಟು 38ಸ್ತಬ್ದ ಚಿತ್ರಗಳು ಅರ್ಜುನನ ಮುಂದೆ ಸಾಗಲಿವೆ. : -2019- -