ಮೈಸೂರು ದಸರಾ ಪಾಸ್ ವಿತರಣೆ ಬಗ್ಗೆ ಸ್ಪಷ್ಟ ಉತ್ತರ ನೀಡದ ಸಚಿವ ವಿ. ಸೋಮಣ್ಣ…. ಮೈಸೂರು,ಅ,5,2019(..): ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿ ಮೆರವಣಿಗೆ ಹಾಗೂ ಪಂಜಿನ ಕವಾಯಿತು ವೀಕ್ಷಣೆಯ ಪಾಸ್ ಗಳ ವಿತರಣೆಯಲ್ಲಿ ಉಂಟಾಗಿರುವ ಗೊಂದಲ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಸ್ಪಷ್ಟ ಉತ್ತರ ನೀಡದೆ, ಪ್ರತಿ ಬಾರಿಯಂತೆ ಪಾಸ್ ಗಳನ್ನು ವಿತರಿಸಲಾಗುವುದು ಎಂದು ಸಮಜಾಯಿಷಿ ನೀಡಿದ್ದಾರೆ. ವಿಶ್ವ ವಿಖ್ಯಾತ ಮೈಸೂಋಉ ದಸರಾ ಮಹೋತ್ಸವದ ಜಂಬೂಸವಾರಿ ಮೆರವಣಿಗೆ ಹಾಗೂ ಪಂಜಿನ ಕವಾಯಿತು ವೀಕ್ಷಣೆಯ ಪಾಸ್ ಗಳಿಗಾಗಿ ಎರಡು ದಿನಗಳಿಂದ ಕ್ಯೂನಲ್ಲಿ ನಿಂತಿದ್ದರೂ ಪಾಸ್ ಸಿಕ್ಕಿಲ್ಲ ಎಂದು ಸಾರ್ವಜನಿಕರು ಡಿ.ಸಿ ಕಚೇರಿಯಲ್ಲೇ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದರು. ಅಲ್ಲದೆ ಅಧಿಕಾರಿಗಳು ದಸರಾ ಪಾಸ್ ಗಳನ್ನ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಸಿಗದೇ ಸಾರ್ವಜನಿಕರಿಗೆ ಪ್ರತಿಭಟನೆ ಹಿನ್ನೆಲೆ, ಪಾಸ್ ವಿತರಣೆ ಕುರಿತು ಸ್ಪಷ್ಟ ಉತ್ತರ ನೀಡದ ಸಚಿವ ಸೋಮಣ್ಣ, ದಸರಾ ಪಾಸ್ ವಿತರಣೆ ಸಾಕಷ್ಟು ಒತ್ತಡ ಉಂಟು ಮಾಡಿದೆ. ಆದರೂ ಪ್ರತಿ ಬಾರಿಯಂತೆ ಪಾಸ್ ಗಳನ್ನು ವಿತರಿಸಲಾಗುವುದು ಎಂದು ಹೇಳಿದರು. : –.- - –--