ಅಭಿಮಾನಿಗಳಿಗೆ ‘ಆಯುಧಪೂಜೆ’ ಗಿಫ್ಟ್ ಕೊಟ್ಟ ಪವರ್ ಸ್ಟಾರ್ ! ಬೆಂಗಳೂರು, ಅಕ್ಟೋಬರ್ 5, 2019 (..):ಪುನೀತ್‌ ರಾಜ್‌ಕುಮಾರ್‌ ನಟಿಸಿರುವ ‘ಯುವರತ್ನ’ ಸಿನಿಮಾದ ಟೀಸರ್‌ ಅ.7ರಂದು ಸಂಜೆ 5.30ಕ್ಕೆ ಬೆಂಗಳೂರಿನ ಸಂತೋಷ್‌ ಚಿತ್ರಮಂದಿರದಲ್ಲಿ ಬಿಡುಗಡೆಯಾಗಲಿದೆ. ನಟ ಪುನೀತ್‌ ರಾಜ್‌ಕುಮಾರ್‌ ಖುದ್ದು ಈ ವಿಷಯವನ್ನು ಟ್ವೀಟರ್‌ನಲ್ಲಿ ವಿಡಿಯೊ ಮೂಲಕ ಹಂಚಿಕೊಂಡಿದ್ದಾರೆ. ಅಭಿಮಾನಿಗಳ ಬೆಂಬಲವನ್ನೂ ಕೋರಿದ್ದಾರೆ. ಸಂತೋಷ್‌ ಆನಂದರಾಮ್ ನಿರ್ದೇಶನದ ಈ ಚಿತ್ರ ಈಗಾಗಲೇ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಕಥೆ, ಚಿತ್ರಕಥೆಯ ನೊಗವನ್ನೂ ಸಂತೋಷ್‌ ಹೊತ್ತಿದ್ದಾರೆ. ಚಿತ್ರಕ್ಕೆ ‘ಪವರ್ ಆಫ್ ಯೂತ್’ ಅಡಿಬರಹವಿದೆ.