ಸಪ್ತಪದಿ ತುಳಿಯಲು ಸಜ್ಜಾದ ‘ಆ ದಿನಗಳ’ ಅರ್ಚನಾ ! ಬೆಂಗಳೂರು, ಅಕ್ಟೋಬರ್ 5, 2019 (..):ಆ ದಿನಗಳು ಖ್ಯಾತಿಯ ನಟಿ ಅರ್ಚನಾ ವೇದಾ-ಜಗದೀಶ್ ಎಂಬುವವರ ಜತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಬಹುಕಾಲದಿಂದ ಪ್ರೀತಿಸುತ್ತಿದ್ದ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಜಗದೀಶ್ ಹೆಲ್ತ್ ಕೇರ್ ಕಂಪನಿಯೊಂದರ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಬ್ಬರು ತಮ್ಮ ಪ್ರೀತಿಯ ವಿಚಾರವನ್ನು ಕುಟುಂಬದವರಿಗೆ ತಿಳಿಸಿದ್ದರು. ನಂತರ ಎರಡೂ ಕುಟುಂಬವು ಒಪ್ಪಿ ಅರ್ಚನಾ ಮತ್ತು ಜಗದೀಶ್ ನಿಶ್ಚಿತಾರ್ಥ ಹೈದರಾಬಾದಿನ ರಾಡಿಸನ್ ಹೋಟೆಲಿನಲ್ಲಿ ಅದ್ಧೂರಿಯಾಗಿ ನಡೆದಿದೆ.