ಜನ ಕ್ಯಾಕರ್ಸ್ಕೊಂಡು ಉಗಿತಾ ಇದ್ದಾರೆ: ಎಷ್ಟು ಅಂತಾ ಒರೆಸ್ಕೋತಿರಪ್ಪ- ಬಿಜೆಪಿ ನಾಯಕರ ವಿರುದ್ದ ನಟ ಪ್ರಕಾಶ್ ರೈ ಲೇವಡಿ… ಬೆಂಗಳೂರು,ಅ,4,2019(..): ಬಿಜೆಪಿ ನಾಯಕರ ವಿರುದ್ದ ಪದೇ ಪದೇ ಟ್ವಿಟ್ಟರ್ ನಲ್ಲಿ ಟೀಕಿಸುತ್ತಿದ್ದ ಬಹುಭಾಷಾ ನಟ ಪ್ರಕಾಶ್ ರೈ ಇದೀಗ ನೆರೆ ಪರಿಹಾರ ವಿಚಾರದಲ್ಲಿ ಬಿಜೆಪಿ ನಾಯಕರ ಕಾಲೆಳೆದಿದ್ದಾರೆ. ಟ್ವಿಟ್ಟರ್ ನಲ್ಲಿ ಟ್ವಿಟ್ ಮಾಡಿರುವ ನಟ ಪ್ರಕಾಶ್ ರೈ, ನಾನು ಉಗಿದೆ, ಒರಸ್ಕೊಂಡ್ರಿ. ಈಗ ಜನ ಕ್ಯಾಕರ್ಸ್ಕೊಂಡು ಉಗಿತಾ ಇದ್ದಾರೆ. ಎಷ್ಟುಂತಾ ಒರೆಸ್ಕೋತೀರಪ್ಪ ಎಂದು ಬಿಜೆಪಿ ನಾಯಕರಿಗೆ ವ್ಯಂಗ್ಯವಾಡಿದ್ದಾರೆ. ರಾಜ್ಯದ ನೆರೆ ಪರಿಹಾರ ಪ್ರಸ್ತಾವನೆಯನ್ನ ತಿರಸ್ಕರಿಸಿದ ಕೇಂದ್ರ ಸರಕಾರದ ಧೋರಣೆಯನ್ನು ಖಂಡಿಸಿ ನಟ ಪ್ರಕಾಶ್ ರಾಜ್ ಅವರು ಮತ್ತೆ ಕೇಂದ್ರ ಸರಕಾರದ ವಿರುದ್ಧ ಕಿಡಿಕಾರಿದ್ದಾರೆ. ಉತ್ತರ ಕರ್ನಾಟಕಕ್ಕೆ ನೆರೆ ಪರಿಹಾರ ನೀಡುವಲ್ಲಿ ಕೇಂದ್ರ ಸರಕಾರ ವಿಳಂಬ ನೀತಿಯನ್ನು ಅನುರಿಸುತ್ತಿದೆ ಎಂದು ವಿರೋಧಿಸಿ ಜನರು ಮಾಡಿರುವ ಟ್ವೀಟ್ ಗಳನ್ನು ಅಪ್ಲೋಡ್ ಮಾಡಿ ನಟ ಪ್ರಕಾಶ್ ರಾಜ್ ಹರಿಹಾಯ್ದಿದ್ದಾರೆ. : - --- -