ಮೈಸೂರು ದಸರಾ ಕ್ರೀಡಾಕೂಟ ಹಾಗೂ ದಸರಾ ಸಿಎಂ ಕಪ್ ಕ್ರೀಡಾ ಕೂಟಕ್ಕೆ ಚಾಲನೆ ನೀಡಿದ ಖ್ಯಾತ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು… ಮೈಸೂರು,ಅ,1,2019(..): ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ 2019ರ ಅಂಗವಾಗಿ ಆಯೋಜಿಸಿರುವ ಮೈಸೂರು ದಸರಾ ಕ್ರೀಡಾಕೂಟ ಹಾಗೂ ದಸರಾ ಮುಖ್ಯಮಂತ್ರಿ ಕಪ್ ಕ್ರೀಡಾ ಕೂಟಕ್ಕೆ ಖ್ಯಾತ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಅವರು ಚಾಲನೆ ನೀಡಿದರು. ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಕ್ರೀಡಾ ಜ್ಯೋತಿಯನ್ನು ಹಸ್ತಾಂತರ ಮಾಡುವ ಮೂಲಕ ದಸರಾ ಕ್ರೀಡಾಕೂಟಕ್ಕೆ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು ಚಾಲನೆ ನೀಡಿದರು. ಮುಖ್ಯಮಂತ್ರಿ ಕಪ್-2019ಕ್ಕೆ ವಿದ್ಯುಕ್ತ ಚಾಲನೆ ದೊರೆಯಿತು. ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಕ್ರೀಡಾ ಧ್ವಜಾರೋಹಣ ನೆರವೇರಿಸಿದರು. ಸಿಎಂ ಜತೆ ನಿಂತು ಪಿ.ವಿ ಸಿಂಧು ಅವರು ಗೌರವ ವಂದನೆ ಸ್ವೀಕರಿಸಿ ಸಲ್ಯೂಟ್ ಮಾಡಿದರು. ಪಿ.ವಿ ಸಿಂಧು ಅವರನ್ನ ನೋಡಿ ಕ್ರೀಡಾಪಟುಗಳು,ಕ್ರೀಡಾಸಕ್ತರು ಖುಷಿಪಟ್ಟರು. ಕಾರ್ಯಕ್ರಮದ ವೇಳೆ ಸಚಿವ ವಿ.ಸೋಮಣ್ಣ, ಸಂಸದ ಪ್ರತಾಪ್ ಸಿಂಹ, ಶಾಸಕ ಎಲ್.ನಾಗೇಂದ್ರ ಸೇರಿದಂತೆ ಪ್ರಮುಖರು ಭಾಗಿಯಾಗಿದ್ದರು. ಈ ವೇಳೆ ಬೆಂಗಳೂರು ನಗರ, ಗ್ರಾಮಾಂತರ, ಬೆಳಗಾವಿ, ಮೈಸೂರು, ಮಂಗಳೂರು ಸೇರಿದಂತೆ ಐದು ವಿಭಾಗಗಳಿಂದ ಪಥ ಸಂಚಲನ ನಡೆಸಲಾಯಿತು. ಪೊಲೀಸ್ ಬ್ಯಾಂಡ್ ಹಿಮ್ಮೇಳದಲ್ಲಿ ಪಥ ಸಂಚಲನ ಸಾಗಿತು. ರಾಜ್ಯದ ಐದು ವಿಭಾಗಗಳಿಂದ ಮೂರ ಸಾವಿರುಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಆಗಮಿಸಿದ್ದು, ಕ್ರೀಡಾಪಟುಗಳು ಮುಖ್ಯ ಅತಿಥಿಗಳಿಗೆ ಪಥಸಂಚನದ ಮೂಲಕ ಕ್ರೀಡಾ ವಂದನೆ ಸಲ್ಲಿಸಿದರು. : - – - - –