ಪ್ರಾಕ್ಟೀಸ್ ಸೆಷನ್’ನಲ್ಲಿ ‘ಅರ್ಜುನ’ ಫಸ್ಟ್ ಕ್ಲಾಸ್ ! ಮೈಸೂರು, ಅಕ್ಟೋಬರ್ 01, 2019 (..): ದಸರಾ ಜಂಬೂ ಸವಾರಿ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಯ ಕ್ಯಾಪ್ಟನ್ ಅರ್ಜುನ ಪ್ರಾಕ್ಟೀಸ್ ಸೆಷನ್ ನಲ್ಲಿ ಫಸ್ಟ್ ಕ್ಲಾಸ್ ಆಗಿ ಪಾಸಾಗಿದ್ದಾರೆ. ನಾಡದೇವತೆಯಿರುವ ಅಂಬಾರಿಯನ್ನು ಹೊರಲಿರುವ ಅರ್ಜುನ ಒಟ್ಟು 750 ಕೆಜಿ ಭಾರ ಹೊತ್ತು ಯಶಸ್ವಿಯಾಗಿ ತಾಲೀಮು ನಡೆಸಿದ್ದಾನೆ. ಅರಮನೆ ಆವರಣದಿಂದ ಸಯ್ಯಾಜಿರಾವ್​ ರಸ್ತೆ ಮೂಲಕ ಹೈವೇ ವೃತ್ತದ ಮೂಲಕ ಯಶಸ್ವಿಯಾಗಿ ಅರ್ಜುನ ಬನ್ನಿಮಂಟಪ ತಲುಪಿದ್ದಾನೆ ಅರ್ಜುನನ ಹಿಂದೆ ಅಭಿಮನ್ಯು, ಕಾವೇರಿ, ವಿಜಯ, ಈಶ್ವರ, ದುರ್ಗಾಪರಮೇಶ್ವರಿ, ಜಯಪ್ರಕಾಶ್​, ಲಕ್ಷ್ಮೀ ಸೇರಿ ಒಟ್ಟು 11 ಆನೆಗಳು ಹೆಜ್ಜೆಹಾಕುತ್ತ ತಾಲೀಮು ಮುಂದುವರಿಸಿವೆ.