ನೆರೆ ಪರಿಹಾರ ವಿಳಂಬಕ್ಕೆ ಕಿಡಿ: ಕೇಂದ್ರ ಸರ್ಕಾರದ ವಿರುದ್ದ ತಿರುಗಿಬಿದ್ದ ಬಿಜೆಪಿ ಶಾಸಕ… ಬೆಂಗಳೂರು,ಅ,1,2019(..): ಬಿಹಾರದಲ್ಲಿನ ಪ್ರವಾಹದ ಬಗ್ಗೆ ಪ್ರಧಾನಿ ಮೋದಿ ಟ್ವೀಟ್ ಮಾಡುತ್ತಾರೆ. ಆದರೆ ಕರ್ನಾಟಕ ನೆರೆ ಬಗ್ಗೆ ತುಟುಕ್ ಪಿಟಿಕ್ ಎನ್ನಲ್ಲ ಎಂದು ನೆರೆ ಪರಿಹಾರ ವಿಳಂಬಕ್ಕೆ ಕೇಂದ್ರ ಸರ್ಕಾರದ ವಿರುದ್ದವೇ ಸ್ವಪಕ್ಷದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ. ವಿಧಾನಸೌಧದಲ್ಲಿ ಇಂದು ಮಾತನಾಡಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸಿಎಂ ಬಿಎಸ್ ಯಡಿಯೂರಪ್ಪರನ್ನ ಟಾರ್ಗೆಟ್ ಮಾಡಲು ಪರಿಹಾರ ಬಿಡುಗಡೆ ಮಾಡುತ್ತಿಲ್ಲ. ಬಿಹಾರದಲ್ಲಿ ಪ್ರವಾಹ ಉಂಟಾಗಿದ್ದಕ್ಕೆ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. ಆದರೆ ಕರ್ನಾಟಕದ ವಿಚಾರವಾಗಿ ತುಟುಕ್ ಪಿಟಿಕ್ ಎಂದಿಲ್ಲ. ಬರ ಪರಿಹಾರದ ಬಗ್ಗೆ ರಾಜ್ಯದ ಜನರು ಕೇಳುತ್ತಿದ್ದಾರೆ. ರಾಜ್ಯದ ಜನತೆಗೆ ನಾವೇನು ಉತ್ತರ ನೀಡಲಿ ಎಂದು ಪ್ರಶ್ನಿಸಿದ್ದಾರೆ. ರಾಜ್ಯದಲ್ಲಿ ಚುನಾವಣೆ ಇಲ್ಲ ಅಂತಾ ಪರಿಹಾರ ನೀಡಿಲ್ಲ. ರಾಜ್ಯದಲ್ಲಿ ಈಗ ಚುನಾವಣೆ ಇಲ್ಲ ಎಂದು ಈ ಭಾವನೆ ಸರಿಯಲ್ಲ. ನಿರ್ಲಕ್ಷ್ಯ ಧೋರಣೆ ಹೀಗೆ ಮುಂದುವರೆದರೇ ರಾಜ್ಯದ ಜನರು ತಕ್ಕ ಪಾಠ ಕಲಿಸುತ್ತಾರೆ ಎಂದು ಬಸನಗೌಡಪಾಟೀಲ್ ಯತ್ನಾಳ್ ಎಚ್ಚರಿಕೆ ನೀಡಿದರು. ಹಾಗೆಯೇ ಬಿಜೆಪಿ ನಾಯಕರು ನಿಯೋಗ ಕರೆದೊಯ್ಯಲಿ ನಾವು ಪ್ರಧಾನಿ ಮೋದಿ ಬಳಿ ಮಾತನಾಡುತ್ತೇವೆ ಸಲಹೆ ನೀಡಿದರು. : - - – –