ಮೈಸೂರು ದಸರಾ ವೇದಿಕೆಯಲ್ಲಿ ಸಿಎಂ ಬಿಎಸ್ ವೈರನ್ನ ಹಾಡಿ ಹೊಗಳಿದ ಮಾಜಿ ಸಚಿವ ಜಿ.ಟಿ ದೇವೇಗೌಡ… ಮೈಸೂರು,ಸೆ,29,2019(..): ಬಿಎಸ್ ಯಡಿಯೂರಪ್ಪ ಸಿಎಂ ಆದ ನಂತರ ರಾಜ್ಯದಲ್ಲಿ ಉತ್ತಮ ಮಳೆಯಾಗಿ ನದಿಗಳೆಲ್ಲಾ ತುಂಬಿವೆ. ನೆರೆ ಹಾವಳಿಯಿಂದ ಸಂಕಷ್ಟಕ್ಕೆ ಸಿಲುಕಿರುವ ಸಂತ್ರಸ್ಥರ ಪಾಲಿಗೆ ಇಂದು ಯಡಿಯೂರಪ್ಪ ದೇವರಾಗಿ ಕೆಲಸ ಮಾಡ್ತಿದ್ದಾರೆ ಎಂದು ಮಾಜಿ ಸಚಿವ ಜಿ.ಟಿ ದೇವೇಗೌಡರು ಗುಣಗಾನ ಮಾಡಿದರು. ಮೈಸೂರು ದಸರಾ ಉದ್ಘಾಟನೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಜಿ ಸಚಿವ ಹಾಗೂ ಜೆಡಿಎಸ್ ಮುಖಂಡ ಜಿ. ಟಿ ದೇವೇಗೌಡ, ಯಡಿಯೂರಪ್ಪನವರು ಅಧಿಕಾರವಧಿಯಲ್ಲಿ ಸಾಕಷ್ಟು ಕೆಲಸಗಳು ಆಗ್ತಿವೆ. ಮುಂದೆನೂ ಕೂಡ ಸಂತ್ರಸ್ತರಿಗೆ ಶಾಶ್ವತ ಪರಿಹಾರವನ್ನ ಸಿಎಂ ನೀಡ್ತಾರೆ. ಯಡಿಯೂರಪ್ಪ ನವರು ಈ ರಾಜ್ಯವನ್ನ ರಾಮರಾಜ್ಯ ಮಾಡಲಿ ಎಂದರು. ಬಿಎಸ್ ಯಡಿಯೂರಪ್ಪ ರೈತ ಹೋರಾಟಗಳ ಮೂಲಕ ಮುನ್ನಲೆಗೆ ಬಂದವರು. ನಾಲ್ಕು ಬಾರಿ ಸಿಎಂ ಆಗಿದ್ದಾರೆ. ಸಿಎಂ ಬಿಎಸ್ ವೈ ಒಳ್ಳೆಯ ಮನಸ್ಸಿನವರು. ಅವರ ಕಾಲ್ಗುಣದಿಂದ ಉತ್ತಮ ಮಳೆಯಾಗಿದೆ. ರಾಜ್ಯದಲ್ಲಿ ಜನರು ನೆರೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದರು. ಈ ವೇಳೆ ಎಲ್ಲವನ್ನೂ ಗಣನೆಗೆ ತೆಗೆದುಕೊಂಡು ಸಿಎಂ ಬಿಎಸ್ ವೈ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಹಾಡಿ ಹೊಗಳಿದರು. ಈ ಬಾರಿಯ ದಸರಾ ಬಹಳ ಅದ್ಬುತವಾಗಿ ಮೂಡಿಬಂದಿದೆ ಎಂದ ಜಿಟಿ ದೇವೇಗೌಡರು ತಿಳಿಸಿದರು. ಹಾಗೆಯೇ ಹಾಸನಕ್ಕೆ ಸಿಕ್ಕ ಅನುದಾನ ಮೈಸೂರಿಗೆ ಸಿಕ್ಕಿಲ್ಲ ಎಂದು ಸಿಟ್ಟನ್ನ ವ್ಯಕ್ತಪಡಿಸಿದರು. : -2019- - -