ಕಮ್ ಬ್ಯಾಕ್ ಉತ್ಸಾಹದಲ್ಲಿದ್ದಾರೆ ಸುರೇಶ್ ರೈನಾ ! ಬೆಂಗಳೂರು, ಸೆಪ್ಟೆಂಬರ್ 28, 2019 (..):ಟೀಮ್ ಇಂಡಿಯಾದಿಂದ ದೂರ ಇರುವ ಸುರೇಶ್ ರೈನಾ ಇದೀಗ ತಂಡಕ್ಕೆ ಕಮ್​ಬ್ಯಾಕ್ ಮಾಡುವ ಉತ್ಸಾಹದಲ್ಲಿದ್ದಾರೆ. ಟಿ-20 ವಿಶ್ವಕಪ್​ವೇಳೆ ಟೀಮ್ ಇಂಡಿಯಾವನ್ನ ಪ್ರತಿನಿಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.ಸುರೇಶ್​ ರೈನಾ, ಈತ ಟೀಂ ಇಂಡಿಯಾದ ಒಂದು ಕಾಲದ ಪ್ರಮುಖ ಬ್ಯಾಟ್ಸ್​ಮನ್. ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದ ಆಧಾರಸ್ಥಂಭ. ಏಕಾಂಗಿಯಾಗಿ ಮ್ಯಾಚ್​ಗಳನ್ನ ಗೆಲ್ಲಿಸಿಕೊಟ್ಟಂತಹ ಮ್ಯಾಚ್​ ವಿನ್ನರ್​. ಆದರೆ, ಟೀಮ್ ಇಂಡಿಯಾದಿಂದ ದೂರ ಉಳಿದು ಒಂದು ವರ್ಷವೇ ಕಳೆದಿದೆ.