ಥಿಯೇಟರ್’ಗಳಲ್ಲಿ ಭರ್ಜರಿ ಒಪೆನಿಂಗ್ ಪಡೆದ ‘ಗೀತಾ’ ! ಬೆಂಗಳೂರು, ಸೆಪ್ಟೆಂಬರ್ 28, 2019 (..):ಚಿತ್ರ ಮಂದಿರಗಳಲ್ಲಿ ಗೀತಾ ಚಿತ್ರ ಭರ್ಜರಿ ಓಪೆನಿಂಗ್ ಪಡೆದಿದೆ. ಅಭಿಮಾನಿಗಳು ನಟ ಗಣೇಶ್ ಕಮ್ ಬ್ಯಾಕ್ ಎಂದು ಗುಣಗಾನ ಮಾಡುತ್ತಿದ್ದಾರೆ! ಹೌದು. ಗೀತಾ ಚಿತ್ರ ರಾಜ್ಯಾದ್ಯಂತ ತೆರೆಕಂಡು ಭರ್ಜರಿ ಓಪನಿಂಗ್ ಪಡೆದಿದೆ. ಸಿನಿಮಾ ನೋಡಿದವರು ಗೋಲ್ಡನ್​​ ಸ್ಟಾರ್ ಈಸ್ ಬ್ಯಾಕ್​ ಎನ್ನುತ್ತಿದ್ದಾರೆ. ಕಾಕ್​​ ಚಳುವಳಿ ಹಿನ್ನೆಲೆಯ ಸಿನಿಮಾ ಅನ್ನೋ ಕಾರಣಕ್ಕೆ ಅತೀವ ಆಸಕ್ತಿ ಕೆರಳಿಸಿದ್ದ ಗೀತಾ, ರಾಜ್ಯಾದ್ಯಂತ ತೆರೆಕಂಡು ಭರ್ಜರಿ ಓಪನಿಂಗ್ ಪಡೆದಿದೆ.