ಸಮ್ಮಿಶ್ರ ಸರ್ಕಾರ ಉರುಳಿಸಿದ್ದೇ ಕಾಂಗ್ರೆಸ್ ನಾಯಕರು: ಎಲ್ಲಾ ಬಹಿರಂಗಪಡಿಸುತ್ತೇವೆ- ಅನರ್ಹ ಶಾಸಕ ಎಸ್.ಟಿ ಸೋಮಶೇಖರ್ ಹೊಸ ಬಾಂಬ್… ಬೆಂಗಳೂರು,ಸೆ,27,2019(..): ಸಮ್ಮಿಶ್ರ ಸರ್ಕಾರ ಉರುಳಿಸಿದ್ದೇ ಕಾಂಗ್ರೆಸ್ ನಾಯಕರು. ಕಾಂಗ್ರೆಸ್ ಮೈತ್ರಿ ಸರ್ಕಾರ ಬೀಳಿಸುತ್ತೇವೆಂದು ಗೊತ್ತಾಗಬಾರದೆಂದು ಪ್ಲಾನ್ ಮಾಡಿದ್ದರು. ಅದರಂತೆ ಸರ್ಕಾರ ಉರಳಿಸಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಎಲ್ಲವನ್ನು ಬಹಿರಂಗ ಮಾಡುತ್ತೇವೆ ಎಂದು ಅನರ್ಹ ಶಾಸಕ ಎಸ್.ಟಿ ಸೋಮಶೇಖರ್ ಹೊಸ ಬಾಂಬ್ ಹಾಕಿದ್ದಾರೆ. ಮಾಧ್ಯಮದ ಜತೆ ಮಾತನಾಡಿದ ಅನರ್ಹ ಶಾಸಕ ಸೋಮಶೇಖರ್‌, ಹೆಚ್.ಡಿ ದೇವೇಗೌಡ, ಹೆಚ್.ಡಿ ಕುಮಾರಸ್ವಾಮಿಗೆ ಗೊತ್ತಾಗದಂತೆ ಸರ್ಕಾರ ಬೀಳಿಸಲು ಪ್ಲಾನ್ ಮಾಡಿದ್ದರು.ಯಾರನ್ನ ಸೋಲಿಸಬೇಕು ಎಂಬುದನ್ನ ಪ್ಲಾನ್ ಮಾಡಿದ್ದರು. ಕೆ.ಜೆ ಜಾರ್ಜ್ ನಿವಾಸದಲ್ಲಿ ಯಾರ್ಯಾರು ಸೇರಿದ್ದರು ಎಲ್ಲಾ ವಿಚಾರಗಳನ್ನ ಕೋರ್ಟ್ ತೀರ್ಪು ಬಂದ ಬಳಿಕ ಸುದ್ದಿಗೋಷ್ಠಿ ನಡೆಸಿ ಬಹಿರಂಗ ಮಾಡುತ್ತೇವೆ. ಸಿದ್ಧರಾಮಯ್ಯಗೆ ಗೊತ್ತಿಲ್ಲದೇ ರಮೇಶ್ ಕುಮಾರ್, ಕೆ.ಜೆ ಜಾರ್ಜ್ ಏನು ಮಾಡಿಲ್ಲ. ಅವರು ಹೇಳದೆ ಒಂದು ಹುಲ್ಲುಕಡ್ಡಿ ಸಹ ಅಲ್ಲಾಡಲ್ಲ. ಸಿದ್ದರಾಮಯ್ಯ ಹೇಳಿದಂತೆ ಅವರಿಬ್ಬರು ಮಾಡಿದ್ದಾರೆ ಎಂದು ಹೇಳಿದರು. ನಿಖಿಲ್‌ ಕುಮಾರಸ್ವಾಮಿಯವನ್ನು ಸೋಲಿಸಿದವರನ್ನು, ತುಮಕೂರಿನಲ್ಲಿ ಸೋಲಿಸಿದವರನ್ನು ಪಕ್ಕದಲ್ಲಿ ಕೂರಿಸಿಕೊಳ್ಳುತ್ತಾರೆ.ಕೆಎಚ್ ಮುನಿಯಪ್ಪ 7 ಬಾರಿ ಗೆದ್ದಿದ್ದರು. ಆದರೆ ಈ ಬಾರಿ ಸೋತಿದ್ದಾರೆ ಅಂದ್ರೆ ಹೇಗೆ.. ಮುನಿಯಪ್ಪ ಸಾಕಷ್ಟು ನೋವು ಅನುಭವಿಸಿದ್ದಾರೆ. ರಮೇಶ್‌ ಕುಮಾರ್‌ಗೆ ಯಾಕೆ ನೋಟಿಸ್‌ ನೀಡೋದಿಲ್ಲ. ಮುನಿಯಪ್ವರವರನ್ನು ಸೋಲಿಸಿದ್ದು ಯಾರು? ಅವರಿಗೆ ಶಿಕ್ಷೆ ಯಾಕಿಲ್ಲ ಅವರು ಎಲ್ಲಿ ಏನು ಮಾತನಾಡಿದ್ದರೆ ಅನ್ನೋ ಆಡಿಯೋ ಇದೆ ಅದನ್ನು ಸದ್ಯದಲ್ಲೇ ಬಿಡುಗಡೆ ಮಾಡಲಿದ್ದೇವೆ ಎಂದು ಹೇಳಿದರು. ದಿನೇಶ್ ಗುಂಡೂರಾವ್ ಒಬ್ಬ ಅಯೋಗ್ಯ, ಸಿದ್ಧರಾಮಯ್ಯ ಅವರ ಚೇಲ…. ಇದೇ ವೇಳೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಿರುದ್ದ ಕಿಡಿಕಾರಿದ ಎಸ್. ಟಿ ಸೋಮಶೇಖರ್, ಗುಂಡೂರಾವ್‌ ಅಯೋಗ್ಯ, ಪಕ್ಷದ ರಾಜ್ಯಾಧ್ಯಾಕ್ಷನಾಗುವ ಯೋಗ್ಯತೆ ಇಲ್ಲ. ಸಿದ್ದರಾಮಯ್ಯನವರ ಚೇಲ, ಬಕೆಟ್ ಎಂದು ವಾಗ್ದಾಳಿ ನಡೆಸಿದರು. : – - - - - .