ಗೋಲ್ಡನ್ ಸ್ಟಾರ್ ‘ಗೀತಾ’ಗೆ ಶುಭ ಹಾರೈಸಿದ ಪವರ್ ಸ್ಟಾರ್ ! ಬೆಂಗಳೂರು, ಸೆಪ್ಟೆಂಬರ್ 27, 2019 (..): ನಟ ಗಣೇಶ್ ಅಭಿನಯದ ಗೀತಾ ಚಿತ್ರಕ್ಕೆ ಪವರ್ ಸ್ಟಾರ್ ಪುನೀತ್ ಶುಭ ಹಾರೈಸಿದ್ದಾರೆ. ಈ ಚಿತ್ರದಲ್ಲಿ ಡಾ.ರಾಜ್ ಭಾಗವಹಿಸಿದ್ದ ಗೋಕಾಕ್ ಚಳವಳಿಯ ತುಣುಕುಗಳನ್ನೂ ಅಳವಡಿಸಿಕೊಳ್ಳಲಾಗಿದೆ. ಅಷ್ಟೇ ಅಲ್ಲದೆ, ಪವರ್ ಸ್ಟಾರ್ ಪುನೀತ್ ಕನ್ನಡದ ಬಗೆಗಿನ ಥೀಮ್ ಸಾಂಗ್ ಒಂದನ್ನು ಈ ಸಿನಿಮಾಗೆ ಹಾಡಿದ್ದಾರೆ. ಈ ಸಿನಿಮಾ ನನಗೆ ವಿಶೇಷವಾಗಿದೆ. ಇದನ್ನು ನೋಡುತ್ತಿದ್ದರೆ ಗೋಕಾಕ್ ಚಳವಳಿಯ ನೆನಪು ಬರುತ್ತದೆ. ಎಲ್ಲರೂ ಚಿತ್ರ ನೋಡಿ ಎಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮನವಿ ಮಾಡಿದ್ದಾರೆ.