ನೀತಿ ಸಂಹಿತೆಯಿಂದಾಗಿ ಮೈಸೂರು ದಸರಾಗೆ ಇದ್ದ ಗೊಂದಲ ನಿವಾರಣೆ…. ಮೈಸೂರು,ಸೆ,23,2019(..): ಉಪ ಚುನಾವಣೆಯ ನೀತಿ ಸಂಹಿತೆಯಿಂದಾಗಿ ವಿಶ್ವ ವಿಖ್ಯಾತ ಮೈಸೂರು ದಸರಾಗೆ ಉಂಟಾಗಿದ್ದ ಗೊಂದಲಕ್ಕೆ ಇಂದು ತೆರೆ ಬಿದ್ದಿದೆ. ರಾಜ್ಯದ 15 ವಿಧಾನಸಭೆ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿ ನೀತಿ ಸಂಹಿತೆ ಜಾರಿಯಾಗಿತ್ತು. ಹುಣಸೂರು ಕ್ಷೇತ್ರಕ್ಕೂ ಉಪಚುನಾವಣೆ ನಡೆಯುತ್ತಿತ್ತು. ಅದ್ದರಿಂದ ನೀತಿ ಸಂಹಿತೆಯಿಂದಾಗಿ ದಸರೆಯ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಜನ ಪ್ರತಿನಿಧಿಗಳು ಪರದಾಡುತ್ತಿದ್ದ ಪರಿಸ್ಥಿತಿ ನಿರ್ಮಾಣವಾಗಿತ್ತು. ನೀತಿ ಸಂಹಿತೆ ಕುರಿತು ಕೇಂದ್ರ ಚುನಾವಣಾ ಆಯೋಗ ಸ್ಪಷ್ಟನೆ ನೀಡಿದ್ದರೂ ಗೊಂದಲ ಉಂಟಾಗಿತ್ತು. ಇದೀಗ ಇಂದು ಎಲ್ಲಾ ಗೊಂದಲಗಳಿಗೂ ಸುಪ್ರೀಂ ಕೋರ್ಟ್ ತೆರೆ ಎಳೆದಿದ್ದು, ಅಕ್ಟೋಬರ್ 22 ರವರೆಗೆ ಯಾವುದೇ ಚುನಾವಣೆ ನಡೆಸದಂತೆ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ. ಹೀಗಾಗಿ ಎಲ್ಲಾ ಕನ್ ಫ್ಯೂಷನ್ ಗಳಿಗೂ ತೆರೆ ಬಿದ್ದಂತಾಗಿದೆ. : – - –