ಹಿಂದಿಯಲ್ಲಿ ‘ಅರುಂಧತಿ’ ರಿಮೇಕ್: ಕರೀನಾಗೆ ಆಫರ್ ಬೆಂಗಳೂರು, ಸೆಪ್ಟೆಂಬರ್ 25, 2019 (..): ನಟಿ ಅನುಷ್ಕಾ ಶೆಟ್ಟಿ ಅಭಿನಯದ ತೆಲುಗು ಚಿತ್ರ ‘ಅರುಂಧತಿ’ ಹಿಂದಿಯಲ್ಲಿ ರಿಮೇಕ್ ಆಗುತ್ತಿದೆ. ಅನುಷ್ಕಾ ಶೆಟ್ಟಿ ನಿರ್ವಹಿಸಿದ ‘ಅರುಂಧತಿ’ ಪಾತ್ರಕ್ಕೆ ಕರೀನಾ ಅವರೇ ಮೊದಲ ಆಯ್ಕೆ. ಒಂದು ವೇಳೆ ಅವರು ಲಭ್ಯವಾಗದಿದ್ದರೆ ಅನುಷ್ಕಾ ಶರ್ಮ ಈ ಚಿತ್ರದಲ್ಲಿ ನಟಿಸಲಿದ್ದಾರೆ. ಸದ್ಯ ಕರೀನಾ ‘ಗುಡ್‌ ನ್ಯೂಸ್‌’, ‘ಅಂಗ್ರೇಜಿ ಮೀಡಿಯಂ’ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕರಣ್‌ ಜೋಹರ್‌ ಅವರ ‘ತಖ್ತ್‌’ ಸಿನಿಮಾದಲ್ಲೂ ನಟಿಸುತ್ತಿದ್ದಾರೆ.