ಬಿಸಿಸಿಐ ಚುನಾವಣೆ ಮುಂದೂಡಿಕೆ: ವಿನೋದ್ ರಾಯ್ ಬೆಂಗಳೂರು, ಸೆಪ್ಟೆಂಬರ್ 25, 2019 (..): ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಚುನಾವಣೆಯನ್ನು ಅಕ್ಟೋಬರ್ 22 ರ ಬದಲು 23ಕ್ಕೆ ಮುಂದೂಡಲಾಗಿದೆ. ಹರಿಯಾಣ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಗಳು ನಡೆಯಲಿರುವ ಕಾರಣ ಚುನಾವಣೆಯನ್ನು ಮುಂದೂಡಲಾಗಿದೆ. ಬಿಸಿಸಿಐಗೆ ಸುಪ್ರೀಂ ಕೋರ್ಟ್ ನೇಮಕ ಮಾಡಿರುವ ಕ್ರಿಕೆಟ್ ಆಡಳಿತ ಸಮಿತಿ (ಸಿಒಎ) ಮುಖಸ್ಥ ವಿನೋದ್ ರಾಯ್ ಅವರು ಈ ವಿಷಯವನ್ನು ಸುದ್ದಿಗಾರರಿಗೆ ತಿಳಿಸಿದ್ದಾರೆ. ಬಿಸಿಸಿಐ ಚುನಾವಣೆಯಲ್ಲಿ ಯಾವುದೇ ಹೆಚ್ಚಿನ ಬದಲಾವಣೆಗಳು ಇಲ್ಲ. ರಾಜ್ಯ ಚುನಾವಣೆಗಳ ಕಾರಣಕ್ಕೆ ಒಂದು ದಿನ ಮುಂದೂಡಲಾಗಿದೆ ಎಂದು ಹೇಳಿದ್ದಾರೆ.