ಸಲ್ಮಾನ್ ಖಾನ್‍ಗೆ ಜೀವ ಬೆದರಿಕೆ ಪೋಸ್ಟ್ ವೈರಲ್ ಬೆಂಗಳೂರು, ಸೆಪ್ಟೆಂಬರ್ 25, 2019 (..): ಸಲ್ಮಾನ್ ಖಾನ್‍ಗೆ ಜೀವ ಬೆದರಿಕೆ ಇದೆ ಎಂಬ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ‘ಸೋಪು’ ಪಂಜಾಬ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆ( ) ಎಂಬ ಗುಂಪಿನಿಂದ ಸಲ್ಮಾನ್ ಖಾನ್ ಅವರಿಗೆ ಈ ಬೆದರಿಕೆ ನೀಡಲಾಗಿದೆ. ಈ ಬೆದರಿಕೆಯನ್ನು ಗ್ಯಾರಿ ಶೂಟರ್ ಎಂಬ ಐಡಿ ನೀಡಿದೆ. ಈ ಬೆದರಿಕೆಯ ಸ್ಕ್ರೀನ್‌ಶಾಟ್ ಅನ್ನು ಈಗ ಎಲ್ಲಾ ಸಾಮಾಜಿಕ ಮಾಧ್ಯಮಗಳ ಪ್ಲಾಟ್‌ಫಾರ್ಮ್‌ಗಳಲ್ಲಿ ಕಾಣಬಹುದು.