ಉಪಚುನಾವಣೆಗೆ ಇನ್ನೆರಡು ದಿನಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಫೈನಲ್-ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿಕೆ ಮೈಸೂರು,ಸೆ,24,2019(..): ರಾಜ್ಯದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಅಕ್ಟೋಬರ್ 21 ರಂದು ಉಪ ಚುನಾವಣೆ ನಡೆಯಲಿದ್ದು ಈ ಹಿನ್ನೆಲೆ ಇನ್ನೆರಡು ದಿನಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಫೈನಲ್ ಆಗಲಿದೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದ್ದಾರೆ. ಮೈಸೂರಿನಲ್ಲಿ ಇಂದು ಮಾತನಾಡಿದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸಪ್ಟೆಂಬರ್ 30 ರ ಒಳಗೆ ನಾಮಪತ್ರ ಸಲ್ಲಿಕೆ ಕಡೇ ದಿನ ಹಿನ್ನಲೆ, ಎರಡು ದಿನದಲ್ಲಿ ಲಿಸ್ಟ್ ಫೈನಲ್ ಮಾಡಲೇಬೇಕು. ಚುನಾವಣೆ ನಡೆದೇ ನಡೆಯುತ್ತದೆ ಇದರಲ್ಲಿ ಯಾವುದೇ ಸಂಶಯ ಬೇಡ. 15 ಕ್ಷೇತ್ರಗಳಲ್ಲಿ ಜೆ ಡಿ ಎಸ್ ಹೆಚ್ಚಿನ ಸ್ಥಾನ ಗೆಲ್ಲಲಿದೆ. ಈ ಚುನಾವಣೆ ಆಡಳಿತ ಪಕ್ಷಕ್ಕೂ ಸೇರಿದಂತೆ ಎಲ್ಲಾ ಪಕ್ಷಗಳಿಗೂ ಅಗ್ನಿ ಪರೀಕ್ಷೆ. ಗೆಲವು ಸಾಧಿಸಲು ಜೆ ಡಿ ಎಸ್ ತನ್ನದೆ ಅದ ರಾಜಕೀಯ ತಂತ್ರಗಾರಿಕೆ ಮಾಡಿದೆ. ಎಲ್ಲ ಕ್ಷೇತ್ರಗಳಲ್ಲಿ ಸ್ಥಳೀಯ ನಾಯಕರಿಗೆ ಅವಕಾಶ ನೀಡಲಾಗುತ್ತದೆ ಎಂದು ಸ್ಪಷ್ಟನೆ ನೀಡಿದರು. ಜೆಡಿಎಸ್ ಮುಖಂಡನ ಸಾವಿಗೆ ಕಂಬನಿ ಮಿಡಿದ ಹೆಚ್.ಡಿಕೆ ಜೆ ಡಿ ಎಸ್ ಮುಖಂಡ ನಾರಾಯಣ ಗೌಡ ಸಾವಿಗೆ ಕಂಬನಿ ಮಿಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಜೆ ಡಿ ಎಸ್ ಮುಖಂಡ ನಾರಾಯಣ ಗೌಡ ಸಾವು ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ. ನಾರಾಯಣ ಗೌಡ ಅವರು ನೇರ ನಿಷ್ಠುರ ನಡೆಗೆ ಹೆಸರಾಗಿದ್ದವರು. ಮೈಸೂರಿನ ನಿಷ್ಠಾವಂತ ಕಾರ್ಯಕರ್ತರನ್ನ ಕಳೆದುಕೊಂಡಿದ್ದೇವೆ. ನಾರಾಯಣ ಗೌಡರಿಗೆ ಕಿರಿಯ ವಯಸ್ಸು. ಸಾವನಪ್ಪುವ ವಯಸ್ಸು ಅಲ್ಲ. ಅವರ ಅತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ನೋವನ್ನ ಭರಿಸುವ ಶಕ್ತಿ ಕೊಡಲಿ ಎಂದು ಹೇಳಿದರು. : - – - - - -