ರಾಜಕಾರಣಿಗೆ ಚೇರ್ ಮುಖ್ಯವಾದಾಗ ರಾಜ್ಯದ ಜನ ನೆನಪಿಗೆ ಬರಲ್ಲ ಎಂದು ಟೀಕಿಸಿದ್ದ ಹೆಚ್.ಡಿಡಿಗೆ ತಿರುಗೇಟು ಕೊಟ್ಟ ಸಚಿವ ಬಸವರಾಜ ಬೊಮ್ಮಾಯಿ… ಕಲಬುರಗಿ,ಸೆ,23,2019(..): ರಾಜಕಾರಣಿಗೆ ಚೇರ್ ಮುಖ್ಯವಾದಾಗ ರಾಜ್ಯದ ಜನ ನೆನಪಿಗೆ ಬರಲ್ಲ ಎಂದು ಟೀಕಿಸಿದ್ದ ಮಾಜಿ ಪ್ರಧಾನಿ ಹೆಚ್‌.ಡಿ ದೇವೇಗೌಡರಿಗೆ ಗೃಹಸಚಿವ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ. ಈ ಬಗ್ಗೆ ಕಲ್ಬುರ್ಗಿಯಲ್ಲಿ ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ದೇವೇಗೌಡರಿಗೆ ರಾಜಕೀಯವಾಗಿ ಹಿನ್ನಡೆಯಾಗಿದೆ. ಹೀಗಾಗಿ ಈ ರೀತಿ ಮಾತನಾಡ್ತಾರೆ. ಅವರು‌ ಹಿರಿಯರಿದ್ದಾರೆ ಅವರ ಬಗ್ಗೆ ನಾನು ಹೆಚ್ಚಿಗೆ ಮಾತನಾಡಲ್ಲ ಎಂದು ಹೇಳಿದರು. ನಾನು ಸಹ ದೆಹಲಿಗೆ ಹೋಗಿ ಕೇಂದ್ರ ಗೃಹಸಚಿವರನ್ನು ಭೇಟಿಯಾಗಿದ್ದೇವೆ. ಆಸ್ತಿ ಪಾಸ್ತಿ, ಬೆಳೆ ಹಾನಿ ಬಗ್ಗೆ ಸಂಪೂರ್ಣ ವಿವರವನ್ನು ಕೊಟ್ಟಿದ್ದೇವೆ. ಕನಿಷ್ಟ ಮಧ್ಯಂತರ ಪರಿಹಾರವಾದರೂ ಕೊಡಿ ಅಂತಾ ನಾವು ಮನವಿ ಮಾಡಿದ್ದೇವೆ. ಆದಷ್ಟು ಶೀಘ್ರವೇ ಪರಿಹಾರ ಕೊಡುವುದಾಗಿ ಕೇಂದ್ರ ಗೃಹಸಚಿವ ಅಮಿತ್ ಶಾ ಹೇಳಿದ್ದಾರೆ. ಕೇಂದ್ರದಿಂದ ಪರಿಹಾರ ಬಂದ ಮೇಲೆ ವ್ಯಾಖ್ಯಾನ ಮಾಡಿದವರಿಗೆ ಉತ್ತರ ಸಿಗುತ್ತೆ ಎಂದು ಟಾಂಗ್ ನೀಡಿದರು. ಯಡಿಯೂರಪ್ಪ ವೀಕೇಸ್ಟ್ ಸಿಎಂ ಎಂಬ ವಿಪಕ್ಷಗಳ ಆರೋಪ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್ ನವರು ಇಂದಿರಾಗಾಂಧಿ ಕಾಲದಿಂದ ಹೈಕಮಾಂಡ್‌ ಸಂಸ್ಕೃತಿಗೆ ತಲೆಬಾಗಿದ ಉದಾಹರಣೆ ಇದೆ. ಅವರಿಗೆ ಈ ರೀತಿಯ ಮಾತುಗಳನ್ನಾಡಲು ಯಾವ ನೈತಿಕತೆ ಇದೆ ಎಂದು ಕಿಡಿಕಾರಿದರು. : - - - -