ಸರ್ಕಾರ ಬೀಳಲಿದೆ ಎಂಬ ಮಾಜಿ ಸಿಎಂ ಎಚ್.ಡಿ.ಕೆ ಹೇಳಿಕೆಗೆ ಟಾಂಗ್ ಕೊಟ್ಟ ಸಚಿವ ವಿ.ಸೋಮಣ್ಣ…. ಮೈಸೂರು,ಸೆ,21,2019(..): ಸರ್ಕಾರ ಬೀಳಲಿದೆ ಎಂದು ಹೇಳಿಕೆ ನೀಡಿದ್ದ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿಗೆ ವಸತಿ ಸಚಿವ ವಿ. ಸೋಮಣ್ಣ ಟಾಂಗ್ ನೀಡಿದ್ದಾರೆ. 224 ಕ್ಷೇತ್ರಗಳಲ್ಲಿ ಚುನಾವಣೆಗೆ ಸಿದ್ದತೆ ಮಾಡಿಕೊಳ್ಳುತ್ತಿದ್ದೇವೆ. ಪ್ರಿಪರೇಟರಿ ನಡೀತಿದೆ ಎಂಬ ಮಾಜಿ ಸಿಎಂ ಎಚ್ ಡಿ ಕೆ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಚಿವ ವಿ,ಸೋಮಣ್ಣ, ದೇವರು ಅವರಿಗೆ ಒಳ್ಳೆಯದು ಮಾಡಲಿ. ಮಾತನಾಡುವುದ್ದಕ್ಕಿಂತ ಎಲ್ಲ ಕಡೆ ಸುತ್ತಾಡಲಿ. ಸರ್ಕಾರ ಬಂದು ಒಂದು ತಿಂಗಳಾಗಿದೆ. ಚಾಮುಂಡೇಶ್ವರಿ ಆಶೀರ್ವಾದ ಇರುವವರೆಗೆ ನಾವು ಇರ್ತಿವಿ ಎಂದು ತಿರುಗೇಟು ನೀಡಿದರು. 14 ತಿಂಗಳು ಅವರೇ ಇದ್ದಿದ್ದು ಅದರ ಬಗ್ಗೆ ನಾನು ಮಾತನಾಡಲ್ಲ. ಅವರು ಏನೇ ಹೇಳಲಿ ಜನರ ಭಾವನೆಯೇ ಬೇರೆ ಇದೆ ಎಂದು ಸಚಿವ ಸೋಮಣ್ಣ ತಿಳಿಸಿದರು. : –. - - – -