ರಾಜ್ಯ ಸರ್ಕಾರ ಪತನದ ಬಗ್ಗೆ ಭವಿಷ್ಯ ನುಡಿದ ಕೋಡಿ ಮಠದ ಶ್ರೀಗಳಿಗೆ ಸವಾಲು ಹಾಕಿದ ಮಂಡ್ಯ ಬಿಜೆಪಿ ಕಾರ್ಯಕರ್ತ ಮಂಡ್ಯ,ಸೆ,20,2019(..): ರಾಜ್ಯ ಬಿಜೆಪಿ ಸರ್ಕಾರ ಇನ್ನು ಮೂರು ನಾಲ್ಕು ತಿಂಗಳಲ್ಲಿ ಪತನವಾಗತ್ತೆ ಎಂದು ಭವಿಷ್ಯ ನುಡಿದಿದ್ದ ಕೋಡಿ ಮಠದ ಶ್ರೀಗಳಿಗೆ ಮಂಡ್ಯದ ಬಿಜೆಪಿ ಕಾರ್ಯಕರ್ತನೊಬ್ಬ ಸವಾಲು ಹಾಕಿದ್ದಾರೆ. ಇನ್ನ ಮೂರು ನಾಲ್ಕು ತಿಂಗಳಲ್ಲಿ ಬಿಜೆಪಿ ಸರ್ಕಾರ ಪತನವಾದ್ರೆ ಹೆಬ್ಬೆರಳು ಕಟ್ ಮಾಡಿಕೊಂಡು ಕೋಡಿ ಮಠದ ಶ್ರೀಗಳ ಪಾದಕ್ಕೆ ಅರ್ಪಿಸುತ್ತೇನೆ ಎಂದು ಮಂಡ್ಯದ ಉಪ್ಪರಕನಹಳ್ಳಿ ಗ್ರಾಮದ ನಿವಾಸಿ ಬಿಜೆಪಿ ಕಾರ್ಯಕರ್ತ ಶಿವಕುಮಾರ್ ಆರಾಧ್ಯ ಸವಾಲು ಹಾಕಿದ್ದಾರೆ. ರಾಜ್ಯ ಬಿಜೆಪಿ ಸರ್ಕಾರ ಮೂರ್ನಾಲ್ಕು ತಿಂಗಳಲ್ಲಿ ಪತನವಾಗುತ್ತದೆ ಎಂದು ಮೊನ್ನೆಯಷ್ಟೆ ಕೋಡಿ ಮಠದ ಶ್ರೀಗಳು ಭವಿಷ್ಯ ನುಡಿದಿದ್ದರು. ಈ ಕುರಿತು ಕೋಡಿಮಠದ ಶ್ರೀಗಳಿಗೆ ಬಿಜೆಪಿ ಕಾರ್ಯಕರ್ತ ಶಿವಕುಮಾರ್ ಆರಾಧ್ಯ ಸವಾಲು ಹಾಕಿದ್ದು, ಒಂದುವೇಳೆ ಸರ್ಕಾರ ಮೂರು ನಾಲ್ಕು ತಿಂಗಳ ಒಳಗೆ ಪತನವಾಗದಿದ್ರೆ ಶ್ರೀಗಳು ಅವರ ಪಟ್ಟಾ ಶಿಶ್ಯನಾಗಿ ಸ್ವೀಕರಿಸುವಂತೆ ಆಗ್ರಹಿಸಿದ್ದಾರೆ. : – - – – –