ಕಿರುತೆರೆ ಇತಿಹಾಸದಲ್ಲಿ ಹೊಸ ದಾಖಲೆ ಬರೆದ ಜೀ ಕನ್ನಡದ ‘ಜೊತೆ ಜೊತೆಯಲಿ’ ಬೆಂಗಳೂರು, ಸೆಪ್ಟೆಂಬರ್ 20, 2019 (..): ಜೀ ಕನ್ನಡ ವಾಹಿನಿಯ ಮತ್ತೊಂದು ಧಾರಾವಾಹಿ ಇತಿಹಾಸ ಬರೆದಿದೆ. ಕನ್ನಡ ಕಿರುತೆರೆಯ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ, ಶುರುವಾದ ಮೊದಲನೇ ವಾರದಲ್ಲಿ ನಂಬರ್ 1 ಧಾರಾವಾಹಿಯಾಗಿ ಜೊತೆ ಜೊತೆಯಲ್ಲಿ ಹೊರಹೊಮ್ಮಿದೆ. ಜೊತೆ ಜೊತೆಯಲ್ಲಿ ಧಾರವಾಹಿ ಬ್ಲಾಕ್ ಬಾಸ್ಟರ್ ಪಡೆದು ಮೊದಲ ವಾರದಲ್ಲೇ ಕಿರುತೆರೆಯ . 1 ಸ್ಥಾನ ಗಿಟ್ಟಿಸಿ ಕೊಂಡಿದೆ. ಮೊದಲ ಬಾರಿಗೆ ಕಿರುತೆರೆಗೆ ಕಾಲಿಟ್ಟಿರುವ ನಟ ಅನಿರುದ್ದ ಅವರ ಕೆರಿಯರ್ ನಲ್ಲಿ ಬ್ರೇಕ್ ಸಿಗುವ ಲಕ್ಷಣಗಳು ಕಾಣುತ್ತಿದೆ.