ಮುಖಕ್ಕೆ ಮಾಸ್ಕ್ ಹಾಕಿಕೊಂಡು ಟಾಂಗ ಗಾಡಿಯಲ್ಲಿ ಮೈಸೂರು ರೌಂಡ್ಸ್ ಹಾಕಿದ ನಟ ಜಗ್ಗೇಶ್… ಮೈಸೂರು,ಸೆ,19,2019(..): ನವರಸ ನಾಯಕ ನಟ ಜಗ್ಗೇಶ್ ಅವರು ಸಾರ್ವಜನಿಕರಿಗೆ ತಿಳಿಯದಂತೆ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಕುದುರೆ ಟಾಂಗಾ ಗಾಡಿಯಲ್ಲಿ ಮೈಸೂರು ನಗರ ರೌಂಡ್ಸ್ ಹಾಕಿದ್ದಾರೆ. ಕೆ.ಆರ್.ಸರ್ಕಲ್ ಮುಖಾಂತರ ನಟ ಜಗ್ಗೇಶ್ ಟಾಂಗ್ ಗಾಡಿ ಏರಿ ನಗರದಲ್ಲಿ ಸಾಗಿದರು. ಮುಖಕ್ಕೆ ಮಾಸ್ಕ್ ಹಾಕಿಕೊಂಡು ಸಾರ್ವಜನಿಕರಿಗೆ ತಿಳಿಯದಂತೆ ಜಯಚಾಮರಾಜೇಂದ್ರ ವೃತ್ತದಲ್ಲಿ ನಡೆದುಕೊಂಡು ಸುತ್ತಾಡಿದ ನಟ ಜಗ್ಗೇಶ್ ಮೈಸೂರು ಮೈಸೂರು ಸಿಟಿ ರೌಂಡ್ಸ್ ಹಾಕಿದರು. ಮೈಸೂರಿನಲ್ಲಿ ಕಳೆದ ಹಳೆಯ ನೆನಪುಗಳ ಮೆಲಕು ಹಾಕಿದ ನಟ ಜಗ್ಗೇಶ್, ಫೇಸ್ ಬುಕ್ ಮುಖಾಂತರ ಬಾಲ್ಯದ ಸಂತಸ ಹಂಚಿಕೊಂಡರು. ಮೈಸೂರಿಗೆ ರಾಜಣ್ಣನ ಸಿನಿಮಾ ನೋಡಲು ಬರುತ್ತಿದ್ದೆ. ಅಮ್ಮನ ಜೊತೆ ಶ್ರೀರಾಮಪುರದಿಂದ ನವರಂಗ ಚಿತ್ರಮಂದಿರಕ್ಕೆ ಹೋಗಿದ್ದೆ. ಅಲ್ಲಿ ಕೃಷ್ಣದೇವರಾಯನ ಚಿತ್ರ ನೋಡಿದ್ದ ನೆನಪು ಕಾಡಿತು. ನಾವು ಮಕ್ಕಳಂತೆ ಸಂತೋಷವಾಗಿ ಬದುಕಬಹುದು ಎಂದು ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಿಗೆ ಪೋಸ್ಟ್ ಮಾಡಿದ್ದಾರೆ. : - – - –