ಎಸ್ ಸಿಪಿ –ಟಿಎಸ್ ಪಿ ಕಾಯ್ದೆ ದುರ್ಬಲಗೊಳಿಸಿದ್ರೆ ಹೋರಾಟ- ರಾಜ್ಯ ಸರ್ಕಾರಕ್ಕೆ ಮಾಜಿ ಸಿಎಂ ಸಿದ್ಧರಾಮಯ್ಯ ಎಚ್ಚರಿಕೆ… ಬೆಂಗಳೂರು,ಸೆ,18,2019(..): ನಮ್ಮ ಅವಧಿಯ ಎಸ್ ಸಿಪಿ –ಟಿಎಸ್ ಪಿ ಕಾಯ್ದೆಯನ್ನ ದುರ್ಬಲಗೊಳಿಸಲು ಮುಂದಾದರೇ ದಲಿತ ಸಮುದಾಯ ದಂಗೆ ಎದ್ದೀತು. ಅದರ ಮುಂಚೂಣಿಯಲ್ಲಿ ನಾನೇ ಇರುತ್ತೇನೆ ಎಂದು ರಾಜ್ಯ ಸರ್ಕಾರಕ್ಕೆ ಮಾಜಿ ಸಿಎಂ ಸಿದ್ಧರಾಮಯ್ಯ ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ಟ್ವಿಟ್‌ ಮಾಡಿರುವ ಮಾಜಿ ಸಿಎಂ ಸಿದ್ಧರಾಮಯ್ಯ, ರಾಜ್ಯ ಬಿಜೆಪಿ ಸರ್ಕಾರದ ಬಣ್ಣ ಬಹಳ ಬೇಗ ಬಯಲಾಗುತ್ತಿದೆ. ತನ್ನ ನಿಜಬಣ್ಣ ದಲಿತ ವಿರೋಧಿ ಎನ್ನುವುದು ಸಾಬೀತಾಗ್ತಿದೆ. ನಮ್ಮ ಕಾಲದ ಕ್ರಾಂತಿಕಾರಿ ಎಸ್‌ಸಿಪಿ-ಟಿಎಸ್‌ಪಿ ಕಾಯ್ದೆಯನ್ನು ದುರ್ಬಲಗೊಳಿಸಲು ಹೊರಟರೆ‌ ದಲಿತ ಸಮುದಾಯ ದಂಗೆ ಎದ್ದೀತು. ಅದರ ಮುಂಚೂಣಿಯಲ್ಲಿ ನಾನೇ ಇರುತ್ತೇನೆ ಎಂದು ಹೇಳಿದ್ದಾರೆ. ಹಾಗೆಯೇ ಇನ್ನೊಂದು ಟ್ವಿಟ್ ನಲ್ಲಿ ಎಸ್ ಸಿಪಿ –ಟಿಎಸ್ ಪಿ ಯೋಜನೆ ತಿದ್ದುಪಡಿ ತಂದು ಅನುದಾನ ಕಡಿತಗೊಳಿಸುವ ಬಿಜೆಪಿ ಸರ್ಕಾರದ ದುಷ್ಟ ಆಲೋಚನೆಯ ವಿರುದ್ದ ಬಿಜೆಪಿ ಶಾಸಕರೂ ಕೂಡ ಧ್ವನಿ ಎತ್ತಬೇಕು ಎಂದು ವಿನಂತಿಸುತ್ತೇನೆ. ಇಂತಹ ದ್ರೋಹ ಚಿಂತನೆಯನ್ನು ಪಕ್ಷದ ದಾಸ್ಯಕ್ಕೆ ಕಟ್ಟುಬಿದ್ದು ಸಹಿಸಿಕೊಂಡರೇ ಇತಿಹಾಸ ಕ್ಷಮಿಸದು ಎಂದು ಟ್ವಿಟ್ ಮಾಡಿದ್ದಾರೆ. : –- - --