ಕಾರಿನೊಳಗೆ ಗ್ರಾಮ ಪಂಚಾಯತ್ ಸದಸ್ಯ ಅನುಮಾನಸ್ಪದವಾಗಿ ಸಾವು… ಮೈಸೂರು,ಸೆ,18,2019(..): ಗ್ರಾಮ ಪಂಚಾಯತ್ ಸದಸ್ಯನೊಬ್ಬ ರಸ್ತೆ ಬದಿಯಲ್ಲಿ ತನ್ನ ಕಾರಿನಲ್ಲೇ ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ. ಪಿರಿಯಾಪಟ್ಟಣ ತಾಲ್ಲೂಕಿನ ರಾವಂದೂರು ಕೆಳಗನಹಳ್ಳಿ ರಸ್ತೆ ಬಳಿ ಈ ಘಟನೆ ನಡೆದಿದೆ. ಗ್ರಾಮ ಪಂಚಾಯತ್ ಸದಸ್ಯ ಅಶೋಕ್ (33) ವರ್ಷ ಅನುಮಾನಸ್ಪದವಾಗಿ ಮೃತಪಟ್ಟ ವ್ಯಕ್ತಿ, ಅಶೋಕ್ ಮಾಜಿ ಸಚಿವ ಸಾರಾ ಮಹೇಶ್ ಕಟ್ಟಾ ಬೆಂಬಲಿಗರಾಗಿದ್ದಾರೆ. ಅಶೋಕ್ ಕೆ.ಆರ್. ತಾಲ್ಲೂಕಿನ ಅನಸೋಗೆ ಗ್ರಾಮ ಪಂಚಾಯತಿ ಸದಸ್ಯರಾಗಿದ್ದಾರೆ. ಸೋಮವಾರ ರಾತ್ರಿ ರಾವಂದೂರು ಹಾಗೂ ಕೆಳಗನಹಳ್ಳಿ ರಸ್ತೆ ಬದಿಯಲ್ಲಿ ಎಲ್ಲಾ ಗ್ಲಾಸ್ ಗಳನ್ನು ಮುಚ್ಚಿದ ಸ್ಥಿತಿಯಲ್ಲಿ ನಿಂತಿತ್ತು, ಈ ಬಗ್ಗೆ ಸ್ಥಳೀಯರು ನೆನ್ನೆ ಪೋಲಿಸರಿಗೆ ಮಾಹಿತಿ ನೀಡಿದ್ದು ತಕ್ಷಣ ಸ್ಥಳಕ್ಕೆ ಬಂದ ಪೋಲಿಸರು ಕಾರಿನ ಗ್ಲಾಸ್ ಹೊಡೆದು ನೋಡಿದಾಗ ಡ್ರೈವರ್ ಸೀಟ್ ನಲ್ಲಿ ವ್ಯಕ್ತಿ ಮೃತಪಟ್ಟಿರುವುದು ಕಂಡುಬಂದಿದೆ. ತಕ್ಷಣ ಕಾರ್ ನಲ್ಲಿದ್ದ ಫೋನ್ ನಂಬರ್ ಗೆ ಕರೆ ಮಾಡಿದಾಗ ಮೃತ ಅಶೋಕ್ ಅನಸೋಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೊಳೆತಂದ್ರೆ ಗ್ರಾಮದವರೆಂದು ತಿಳಿದುಬಂದಿದ್ದು, ಅಶೋಕ್ ಅನುಮಾನಸ್ಪದ ಸಾವಿನ ಬಗ್ಗೆ ಪಿರಿಯಾಪಟ್ಟಣ ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. : - - –- –-