ಡಿ.ಆರ್.ಡಿ.ಒ ಸಂಸ್ಥೆಯ ಮಾನವ ರಹಿತ ವಿಮಾನ ಪತನ.. ಚಿತ್ರದುರ್ಗ,ಸೆ,17,2019(..) ಡಿ.ಆರ್.ಡಿ.ಒ ಸಂಸ್ಥೆ ನಿರ್ಮಿಸಿದ್ದ ಮಾನವ ರಹಿತ ವಿಮಾನ ಚಿತ್ರದುರ್ಗ ತಾಲೂಕಿನ ಜೋಡಿಚಿಕ್ಕೆನಹಳ್ಳಿ ಗ್ರಾಮದ ಬಳಿ ಪತನವಾದ ಘಟನೆ ಇಂದು ಬೆಳಿಗ್ಗೆ ನಡೆದಿದೆ. ಚಳ್ಳಕೆರೆ ತಾಲೂಕಿನ ಡಿ.ಆರ್.ಡಿ.ಒ ಸಂಸ್ಥೆಯ ವಿಮಾನ ಇದಾಗಿದ್ದು, ಪರಿಕ್ಷಾರ್ಥವಾಗಿ ಹಾರಿಸಲಾಗಿತ್ತು. ಜೋಡಿಚಿಕ್ಕೆನಹಳ್ಳಿ ಗ್ರಾಮದ ಬಳಿ ವಿಮಾನ ಪತನವಾದಾಗ ವಿಮಾನ ಬೆಂಕಿ ಹತ್ತಿಕೊಳ್ಳುತ್ತೆ ಸ್ಥಳೀಯರು ಭಯಭೀತರಾದರು. ಪತನವಾದ ವಿಮಾನದಲ್ಲಿ ಪ್ರಯಾಣಿಕ ರಿದ್ದಾರೆಂದು ಜನರು ಆತಂಕಗೊಂಡಿದ್ದರು ಬಳಿಯ ಗ್ರಾಮಸ್ಥರು ಧೈರ್ಯಮಾಡಿ ಹತ್ತಿರ ಹೋಗಿ ನೋಡಿದ್ದು, ವಿಮಾನದಲ್ಲಿ ಕೇವಲ ವೈಯರ್ ಗಳನ್ನು ಕಂಡು ಆಶ್ಚರ್ಯಕ್ಕೆ ಒಳಗಾಗಿದ್ದಾರೆ. ಈ ನಡುವೆ ಪತನವಾದ ವಿಮಾನ ಮಾನವ ರಹಿತ ವಿಮಾನ ಎಂಬುದು ಗೊತ್ತಾಗುತ್ತಿದ್ದಂತೆ ಅಲ್ಲಿದ್ದ ಯುವಕರು ವಿಮಾನದ ಮೇಲೆ ಹತ್ತಿ ಕುಣಿದಾಡಿದರು. : - - -