ಅಪರೂಪದ ಪುನುಗು ಬೆಕ್ಕು ರಕ್ಷಿಸಿದ ಉರಗ ತಜ್ಞ ಸ್ನೇಕ್ ಶ್ಯಾಮ್ ಮೈಸೂರು,ಸೆ,17,2019(..): ಉರಗ ತಜ್ಞ ಸ್ನೇಕ್ ಶ್ಯಾಮ್ ಅವರು ಮೈಸೂರಿನಲ್ಲಿ ಅಪರೂಪದ ಪುನುಗು ಬೆಕ್ಕೊಂದನ್ನ ರಕ್ಷಿಸಿದ್ದಾರೆ. ಮೈಸೂರಿನ ಸಿದ್ದಲಿಂಗಪುರದ ಮನೆಯೊಂದರಲ್ಲಿ ಶೋ‌ಕೇಸ್ ನಲ್ಲಿ ಪುನುಗು ಬೆಕ್ಕು ಅವಿತು ಕುಳಿತುಕೊಂಡಿತ್ತು. ನಾಯಿಗಳ ಅಟ್ಟಾಡಿಸಿದ ಹಿನ್ನೆಲೆ ಮನೆಗೆ ನುಗ್ಗಿ ಶೋ ಕೇಸ್ ಏರಿ ಕುಳಿತಿತ್ತು. ಈ ವೇಳೆ ಮನೆಯಲ್ಲಿದ್ದವರು ತಡರಾತ್ರಿಯೇ ಉರಗ ತಜ್ಞ ಸ್ನೇಕ್ ಶ್ಯಾಂ ಅವರಿಗೆ ಫೋನ್ ಮಾಡಿದ್ದಾರೆ. ತಕ್ಷಣ ಅಲ್ಲಿಗೆ ಬಂದ ಸ್ನೇಕ್ ಶ್ಯಾಂ ಅವಿತು ಕುಳಿತಿದ್ದ ಪುನುಗು ಬೆಕ್ಕನ್ನ ರಕ್ಷಿಸಿ ಸಮೀಪದಲ್ಲೇ ಹೊರಗೆ ಬಿಟ್ಟರು. : - -- -