ಸುಮಲತಾಗೆ ಕಾಟ ನೀಡುತ್ತಿರುವ ಫೇಸ್ಬುಕ್ ನಕಲಿ ಖಾತೆಗಳು ! ಬೆಂಗಳೂರು, ಸೆಪ್ಟೆಂಬರ್ 16, 2019 (..): ಸಂಸದೆ, ನಟಿ ಸುಮಲತಾ ಅಂಬರೀಶ್ ಅವರಿಗೆ ಫೇಸ್ ಬುಕ್ ನಕಲಿ ಖಾತೆಗಳ ಕಾಟ ನಿಂತಿಲ್ಲ. ನಕಲಿ ಖಾತೆ ಮುಂದುವರಿಸಿದವರ ವಿರುದ್ಧ ಮತ್ತೆ ಸುಮಲತಾ ಕಿಡಿ ಕಾರಿದ್ದಾರೆ. ತಾನು ಇಷ್ಟು ಎಚ್ಚರಿಕೆ ನೀಡಿದ ಮೇಲೂ ಈ ಬೆಳವಣಿಗೆ ನಿಂತಿಲ್ಲ. ಈ ಪೇಜ್ ಬಗ್ಗೆ ವರದಿ ಮಾಡಿ. ಈಗಾಗಲೇ ಸೈಬರ್ ಕ್ರೈಮ್ ಗೆ ದೂರು ನೀಡಿದ್ದೇನೆ. ಸದ್ಯದಲ್ಲೇ ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ ಎಂದು ಸುಮಲತಾ ಹೇಳಿಕೊಂಡಿದ್ದಾರೆ.