ಯುವ ಆಟಗಾರ ಶುಭಮನ್​ ಗಿಲ್’ಗೆ ಕೆ.ಎಲ್.ರಾಹುಲ್ ಕಳಪೆ ಫಾರ್ಮ್ ಲಾಭ ! ನವದೆಹಲಿ, ಸೆಪ್ಟೆಂಬರ್ 14, 2019 (..): ಸೌತ್​​ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಟೆಸ್ಟ್​ ಸರಣಿಗೆ ಕನ್ನಡಿಗ ಕೆ.ಎಲ್.ರಾಹುಗೆ ಕೊಕ್​ ನೀಡಲಾಗಿದೆ. ರಾಹುಲ್ ಬದಲಿಗೆ ಟೀಮ್ ಇಂಡಿಯಾ ಪರ ರೋಹಿತ್ ಶರ್ಮಾ ಕಣಕ್ಕಿಳಿಯಲಿದ್ದಾರೆ.ಯುವ ಆಟಗಾರ ಶುಭಮನ್​ ಗಿಲ್​, ಕನ್ನಡಿಗ ಕೆ.ಎಲ್.ರಾಹುಲ್​ಗೆ ಸೆಡ್ಡುಹೊಡೆದು ಟೆಸ್ಟ್​ ಬ್ಯಾಕ್​ ಆಫ್​ ಆಟಗಾರನಾಗಿ ಚಾನ್ಸ್​ ಗಿಟ್ಟಿಸಿದ್ದಾರೆ. 4 ದಿನಗಳ ಹಿಂದಷ್ಟೇ 20ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಶುಭಮನ್ ಗಿಲ್​​ಗೆ ಬಿಸಿಸಿಐ ಬಂಫರ್​ ಗಿಫ್ಟ್​ ನೀಡಿದೆ.