ಮಾತು ಬಾರದ ‘’ ಚಿತ್ರಕ್ಕೆ ಅನುಷ್ಕಾ ಸಿದ್ಧತೆ ! ಬೆಂಗಳೂರು, ಸೆಪ್ಟೆಂಬರ್ 14, 2019 (..): ನಟಿ ಅನುಷ್ಕಾ ಶೆಟ್ಟಿ ವಿದೇಶಕ್ಕೆ ತೆರಳಿ ದೇಹದ ತೂಕ ಇಳಿಸಿಕೊಳ್ಳುವ ಚಿಕಿತ್ಸೆ ಪಡೆದು ನಂತರ ಭಾರತಕ್ಕೆ ಮರಳಿದ್ದರು. ಇದೀಗ ಹೊಸ ಚಿತ್ರದ ತಯಾರಿಯಲ್ಲಿ ನಿರತರಾಗಿದ್ದಾರೆ. ಭಾರತಕ್ಕೆ ಮರಳುವ ಮುನ್ನವೇ ಅವರಿಗೆ ಹಾಲಿವುಡ್​ ಅಂದರೆ ಇಂಗ್ಲಿಷ್​ ಸಿನಿಮಾದಲ್ಲಿ ಅಭಿನಯಿಸಲು ಅವಕಾಶವೊಂದು ಅರಸಿ ಬಂದಿತ್ತು. ಆ ಸಿನಿಮಾಗಾಗಿ ಫೋಟೋಶೂಟ್​ ಸಹ ಮಾಡಿಸಲಾಗಿತ್ತು. ಐದು ಭಾಷೆಗಳಲ್ಲಿ ನಿರ್ಮಾಣಗೊಳ್ಳುತ್ತಿರುವ ಚಿತ್ರದಲ್ಲಿ ಅನುಷ್ಕಾ ನಾಯಕಿಯಾಗಿ ಅಭಿನಯಿಸಲಿದ್ದಾರೆ.