ಮಂಗಳೂರಿನಲ್ಲಿ ಅ.2 ರಂದು ‘ಇ-ಸ್ವಚ್ಛ ಭಾರತ್’ ಕಾರ್ಯಕ್ರಮಕ್ಕೆ ಚಾಲನೆ… ಮಂಗಳೂರು,ಸೆ,13,2019(..): ಮಂಗಳೂರಿನಲ್ಲಿ ‘ವಿ ಆರ್ ಯುನೈಟೆಡ್’ ಘಟಕವು ‘ಸೈಬರ್ ಸೇಫ್ ಗರ್ಲ್’ ಸಹಯೋಗದಲ್ಲಿ ಪ್ರಥಮ ಬಾರಿಗೆ ‘ಇ-ಸ್ವಚ್ಛ ಭಾರತ್’ ಎಂಬ ವಿಶಿಷ್ಟ ಎಲೆಕ್ಟ್ರಾನಿಕ್ ತ್ಯಾಜ್ಯ ನಿರ್ವಹಣಾ ಕಾರ್ಯಕ್ರಮಗಳಿಗೆ ಅ.2ರಂದು ಮಂಗಳೂರಿನಲ್ಲಿ ಚಾಲನೆ ನೀಡಲಿದೆ. ಇ-ತ್ಯಾಜ್ಯದ ಕುರಿತಂತೆ ಜನರಲ್ಲಿ ಜಾಗೃತಿ ಮೂಡಿಸುವ ಜತೆಗೆ ಇ-ತ್ಯಾಜ್ಯಗಳ ಪ್ರಮಾಣವನ್ನು ತಗ್ಗಿಸುವುದು, ಅವುಗಳ ಪುನರ್ ಬಳಕೆ ಮಾಡುವುದು ಹಾಗೂ ಇ-ತ್ಯಾಜ್ಯಗಳನ್ನು ವಿಂಗಡಿಸಿ ವಿಲೇವಾರಿ ಮಾಡಲು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸುವುದು ಇ-ಸ್ವಚ್ಛ ಭಾರತ್ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಆ್ಯಂಡ್ ಮ್ಯಾನೇಜ್‌ಮೆಂಟ್‌ನ ಪ್ರೊಫೆಸರ್ ಡಾ. ಅನಂತ್ ಪ್ರಭು ಜಿ. ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಅಕ್ಟೋಬರ್ 2ಕ್ಕಿಂತ ಮೊದಲು ಮಂಗಳೂರು ನಗರ ವಾಸಿಗಳಿಂದ ಇ-ತ್ಯಾಜ್ಯಗಳನ್ನು ಸಂಗ್ರಹಿಸಲಾಗುವುದು. ಅವುಗಳನ್ನು ಹೈದ್ರಾಬಾದ್‌ನಲ್ಲಿರುವ ವಿಲೇವಾರಿ ಕಂಪೆನಿಗೆ ನೀಡಿ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗುವುದು. ಈ ಕಾರ್ಯಕ್ರಮವನ್ನು ಒಂದೇ ಬಾರಿ ನಡೆಸಲಾಗುವುದು. ಬಳಿಕ ಇ-ತ್ಯಾಾಜ್ಯದ ಕುರಿತು ಜನಜಾಗೃತಿ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಲಾಗುವುದು ಎಂದವರು ಹೇಳಿದರು. 200 ಅಪಾರ್ಟ್‌ಮೆಂಟ್‌ಗಳಿಂದ ಸಂಗ್ರಹ: ಹೆಚ್ಚು ತ್ಯಾಜ್ಯ ಕೊಟ್ಟವರಿಗೆ ಶ್ಲಾಘನಾ ಪತ್ರ…. ಮಂಗಳೂರಿನ 200 ಅಪಾರ್ಟ್‌ಮೆಂಟ್‌ಗಳಿಗೆ ಭೇಟಿ ನೀಡಿ ಇ-ತ್ಯಾಜ್ಯ ಸಂಗ್ರಹಣಾ ದಿನದ ಮಾಹಿತಿಯಿರುವ ಪೋಸ್ಟರನ್ನು ಅಲ್ಲಿನ ನೋಟಿಸ್ ಬೋರ್ಡ್‌ನಲ್ಲಿ ಅಂಟಿಸುತ್ತೇವೆ. ನಿರ್ದಿಷ್ಟವಾಗಿ ಸೂಚಿತ ದಿನದಂದು ಅಲ್ಲಿಗೆ ತೆರಳಿ ಇ-ತ್ಯಾಜ್ಯವನ್ನು ಸಂಗ್ರಹಿಸುತ್ತೇವೆ. ಇ-ತ್ಯಾಜ್ಯಕ್ಕೆ ವಸ್ತುಗಳನ್ನು ನೀಡಿ ಈ ಯೋಜನೆಗೆ ಬೆಂಬಲ ಸೂಚಿಸುವ ಎಲ್ಲರಿಗೂ ‘ಸೈಬರ್ ಸೇಫ್ ಗರ್ಲ್’ ಪುಸ್ತಕದ ಪ್ರತಿಯನ್ನು ನೀಡಲಾಗುವುದು. ಅತಿ ಹೆಚ್ಚು ಇ-ತ್ಯಾಜ್ಯ ನೀಡಿದವರಿಗೆ ಶ್ಲಾಘನಾ ಪ್ರಮಾಣಪತ್ರ ನೀಡಲಾಗುವುದು ಎಂದರು. ಜನಜಾಗೃತಿ… ಇ-ತ್ಯಾಜ್ಯ ಕುರಿತಂತೆ ಇರುವ ಹಲವು ನಿಯಮಾವಳಿಗಳ ಕುರಿತಂತೆಯೂ ಜಾಗೃತಿ ಮೂಡಿಸುವ ಉದ್ದೇಶ ಸಂಘಟನೆಗಿದೆ. ಪ್ರಸ್ತುತ ವಿಶ್ವದಲ್ಲೇ ಇ-ತ್ಯಾಜ್ಯ ಉತ್ಪಾದನೆಯಾಗುವ ಮೊದಲ ದೇಶ ಭಾರತವಾಗಿದ್ದು, ಅದರ ನಿರ್ವಹಣೆಯೇ ಬಹುದೊಡ್ಡ ಸಮಸ್ಯೆಯಾಗಿ ಮಾರ್ಪಟ್ಟಿದೆ. ಇ-ತ್ಯಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ವಿಷಕಾರಿ ರಾಸಾಯನಿಕ ಇರುವುದರಿಂದ ಪರಿಸರ- ಜನಜೀವನಕ್ಕೂ ಮಾರಕವಾಗಿದೆ. ಈ ಹಿನ್ನೆಲೆಯಲ್ಲಿ ಇ-ಸ್ವಚ್ಛ ಭಾರತ್ ಕಾರ್ಯಕ್ರಮ ಆಯೋಜಿಸಿರುವುದಾಗಿ ಅನಂತ ಪ್ರಭು ಜಿ. ತಿಳಿಸಿದರು. ಇ-ತ್ಯಾಜ್ಯ ನಿರ್ವಹಣೆ ಲಾಭದಾಯಕವೂ ಹೌದು. ಅನೇಕ ರಾಷ್ಟ್ರಗಳು ಇ-ತ್ಯಾಜ್ಯಗಳನ್ನು ಆಮದು ಮಾಡಿ ವಿಲೇವಾರಿ ಮಾಡುತ್ತಿವೆ. ನಮ್ಮ ದೇಶದಲ್ಲಿ ಇ-ತ್ಯಾಜ್ಯ ವಿಲೇವಾರಿಯ ಕುರಿತು ನಿಯಮಗಳಿದ್ದು, ಅವುಗಳ ಪರಿಣಾಮಕಾರಿ ಜಾರಿ ಆಗಬೇಕಿದೆ ಎಂದರು. ವಿಕಾಸ್ ಕಾಲೇಜಿನ ಟ್ರಸ್ಟಿ ಜೆ ಕೊರಗಪ್ಪ, ವಿ ಆರ್ ಯುನೈಟೆಡ್‌ನ ಅಧ್ಯಕ್ಷ ಅಜ್ಫಾರ್ ರಝಾಕ್, ಉದ್ಯಮಿ ರಕ್ಷಿತ್ ಶೆಟ್ಟಿ, ವಿ ಆರ್ ಯುನೈಟೆಡ್‌ನ ಸಲಹೆಗಾರ ಕೃಷ್ಣ ಶೆಟ್ಟಿ ಮತ್ತಿತರರಿದ್ದರು. ಇಲೆಕ್ಟ್ರಾನಿಕ್ ತ್ಯಾಜ್ಯಗಳ್ಯಾವವು? ಒಡೆದು ಹೋದ ಅಥವಾ ಬಳಕೆಗೆ ಯೋಗ್ಯವಲ್ಲದ ಎಲೆಕ್ಟ್ರಾನಿಕ್ ಮತ್ತು ಎಲೆಕ್ಟ್ರಿಕಲ್ ವಸ್ತುಗಳು ಹಾಗೂ ಸಾಧನಗಳನ್ನು ಎಲೆಕ್ಟ್ರಾನಿಕ್ ವೇಸ್‌ಟ್‌ ಅಥವಾ ಇ-ವೇಸ್‌ಟ್‌ ಎಂದು ಕರೆಯಲಾಗುತ್ತದೆ. ಟ್ಯೂಬ್‌ಲೈಟ್, ಪೆನ್ ಡ್ರೈವ್‌ನಿಂದ ಹಿಡಿದು ಸೆಮಿ ಕಂಡಕ್ಟರ್‌ಗಳು ಹಾಗೂ ಸೆನ್ಸರ್‌ಗಳು, ಮಾನಿಟರ್‌ಗಳು, ಲ್ಯಾಪ್‌ಟಾಪ್, ಕಂಪ್ಯೂಟರ್‌ಗಳು, ಟಿವಿ, ಸ್ಟೀರಿಯೋ, ಕಾಪಿಯರ್ ಹಾಗೂ ಫ್ಯಾಕ್ಸ್ ಮೆಶಿನ್ ಇತ್ಯಾದಿಗಳು. …. (-) . . , , , , . () , (-) . - , . , , , . , , , . . “ ”; 2 - - . , 70% -, 12% , 8% 7% . , , 75% , 16%. 1.012 2018. . 2019 , - - , 48.5 2018. , , , , , , . .. () , “ 40 800 30 40 .” . , , , , , , . - , , . , ’ , , – , . , ’ , , , , . -- - . , , . , , — — . , 13 -. - . , . : 1. 200 . 2. . 3. 2nd, . 4. . 5. . 6. . . , , () . , () () . - , 2011E- , 2016Amendment - , 2018 . : - -- - 2-