ವಿದ್ಯುತ್ ಸ್ಪರ್ಶದಿಂದ ಎರಡು ಹಸುಗಳು ಸಾವು: ರೈತ ಪ್ರಾಣಾಪಾಯದಿಂದ ಪಾರು… ಮೈಸೂರು,ಸೆ,12,2019(..): ವಿದ್ಯುತ್ ಸ್ಪರ್ಶಿಸಿ ಎರಡು ಹಸುಗಳು ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನಲ್ಲಿ ನಡೆದಿದೆ. ಮೈಸೂರು ಹುಣಸೂರು ತಾಲ್ಲೂಕಿನ ಮನುಗನಹಳ್ಳಿಯಲ್ಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಬೆಟ್ಟದೂರು ಗ್ರಾಮದ ಬಡರೈತ ಕೆಂಪಯ್ಯ ಎಂಬುವರಿಗೆ ಸೇರಿದ ಬೆಲೆಬಾಳುವ ಹಸುಗಳು ಮೃತಪಟ್ಟಿವೆ. ಕೆಂಪಯ್ಯ ಮನುಗನಹಳ್ಳಿ ಕೆರೆ ಸಮೀಪ ಹಸು ಮೇಯಿಸಲು ತೆರಳುವ ವೇಳೆ ಈ ಘಟನೆ ನಡೆದಿದೆ. ಸದ್ಯ ಘಟನೆಯಲ್ಲಿ ರೈತ ಕೆಂಪಯ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಕ್ರಮವಾಗಿ ಜಮೀನಿಗೆ ವಿದ್ಯುತ್ ಬೇಲಿ ಹಾಕಲಾಗಿದೆ ಎಂದು ಗ್ರಾಮಸ್ಥರು ಚೆಸ್ಕಾಂ ಅಧಿಕಾರಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. : - – -