ಮೈಸೂರು ದಸರಾ: ಉಪ ಸಮಿತಿ ಪಟ್ಟಿ ಬಿಡುಗಡೆ ಮೀನಾಮೇಷ…? ಮೈಸೂರು,ಸೆ,11,2019(..): ವಿಶ್ವವಿಖ್ಯಾತ ಮೈಸೂರು ದಸರಾಗೆ‌ ದಿನಗಣನೆ ಆರಂಭವಾಗಿದ್ದು ಸಿದ್ಧತಾ ಕಾರ್ಯಗಳು ನಡೆಯುತ್ತಿವೆ. ಈ ನಡುವೆ ದಸರಾ ಉಪಸಮಿತಿ ರಚನೆ ವಿಚಾರ ಬಿಜೆಪಿಗೆ ಕಗ್ಗಾಂಟಾಗಿ ಪರಿಣಮಿಸಿದೆ. ಉಪ ಸಮಿತಿ ಪಟ್ಟಿ ಬಿಡುಗಡೆ ಮಾಡಲು ಬಿಜೆಪಿ ನಾಯಕರು ಮೀನಾಮೇಷ ಎಣಿಸುತ್ತಿದ್ದು ಪಟ್ಟಿ ಸಿದ್ದಗೊಂಡ್ರು ಬಿಡುಗಡೆ ಮಾಡಲು ತಿಣಕಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ಉಪ ಸಮಿತಿ ಪಟ್ಟಿಯಲ್ಲಿಯೂ ಲಾಬಿ ಏನಾದರೂ ನಡೆಯುತ್ತಿದೆಯೇ ಎಂಬ ಪ್ರಶ್ನೆ ಮೂಡಿದೆ. ಗುತ್ತಿಗೆದಾರರುಗಳು ಕಾರ್ಯಕ್ರಮಗಳನ್ನು ಅಂತಿಮ ಮಾಡಿದ ನಂತರ ದಸರಾ ಉಪ ಸಮಿತಿಪಟ್ಟಿ ಬಿಡುಗಡೆಗೆ ಬಿಜೆಪಿ ಸರ್ಕಾರ ಸಿದ್ದವಾಗಿದೆ ಎನ್ನಲಾಗುತ್ತಿದೆ. ಉಪಸಮಿತಿಗೆ ರಚನೆ ಮಾಡಿಯೂ ಅಧಿಕಾರ ಮಾಡದ ಹಾಗೆ ಆಟ ನೆಡೆಸ್ತಿದ್ದಾರಾ ಎಂಬ ಅನುಮಾನ ವ್ಯಕ್ತವಾಗಿದೆ. : - - - -