ಅರ್ಕಾವತಿ, ಮುಡಾ ಹಗರಣ ಕಳಂಕ ಅಲ್ವಾ? ಸಿಎಂ ಸಿದ್ದರಾಮಯ್ಯಗೆ ಸಿ.ಟಿ ರವಿ ಟಾಂಗ್ ಬೆಂಗಳೂರು, ಸೆಪ್ಟಂಬರ್,17,2024 (..):ನನ್ನ ರಾಜಕೀಯ ಜೀವನದಲ್ಲಿ ಒಂದೇ ಒಂದು ಕಳಂಕವಿಲ್ಲ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಟಾಂಗ್ ಕೊಟ್ಟಿರುವ ವಿಧಾನಪರಿಷತ್ ಬಿಜೆಪಿ ಸದಸ್ಯ ಸಿ.ಟಿ.ರವಿ, ಅರ್ಕಾವತಿ ಹಗರಣ, ಮುಡಾ ಹಗರಣ ಇವೆಲ್ಲಾ ನಿಮಗೆ ಕಳಂಕ ಅಂತಾ ಅನ್ನಿಸಲ್ವಾ? ಎಂದು ಪ್ರಶ್ನಿಸಿದ್ದಾರೆ. ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಎಂಎಲ್ ಸಿ ಸಿ.ಟಿ ರವಿ, ಸದನದಲ್ಲಿ ನಮ್ಮ ಪ್ರಶ್ನೆಗೆ ಉತ್ತರಿಸಲಾಗದೆ ಓಡಿ ಹೋದಿರಿ . ಹೊರಗೆ ಬಂದು ನಿಮ್ಮನ್ನು ನೀವು ಸಮರ್ಥಿಸಿಕೊಳ್ಳುತ್ತೀರಿ. ಪ್ರಾಸಿಕ್ಯೂಷನ್ ಗೆ ಅನುಮತಿ ಕೊಟ್ಟರೆ ತನಿಖೆ ಎದುರಿಸಲು ನಿಮಗೆ ಭಯ. ರಾಜ್ಯಪಾಲರ ವಿರುದ್ಧವೇ ಚಳುವಳಿ ಎಬ್ಬಿಸುವ ಮಾತನಾಡುತ್ತಿದ್ದೀರಿ. ವಿಶೇಷ ಅಧಿವೇಶನ ಕರೆಯಿರಿ, ಚರ್ಚೆ ಮಾಡೋಣ ಎಂದು ಸವಾಲು ಹಾಕಿದರು. ಅರ್ಕಾವತಿ ಹಗರಣ, ಮುಡಾ ಹಗರಣ, ವಾಲ್ಮೀಕಿ ಹಗರಣ ಇವುಗಳು ನಿಮಗೆ ಕಳಂಕ ಅಲ್ವಾ? ಎಂದು ಎಂದು ಸಿ.ಟಿ ರವಿ ಕಿಡಿಕಾರಿದರು. : , , ,