ಪೊಲೀಸ್ ಠಾಣೆಗೆ ದಿಢೀರ್ ಭೇಟಿ: ಸ್ವಚ್ಛತೆ ಕಾಪಾಡದಿದ್ದಕ್ಕೆ ಸಿಬ್ಬಂದಿಗೆ ಕ್ಲಾಸ್ ತೆಗೆದುಕೊಂಡ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್…. ಬೆಂಗಳೂರು,ಸೆ,10,2019(..): ನಗರದ ಬನಶಂಕರಿ ಪೊಲೀಸ್ ಠಾಣೆಗೆ ದಿಢೀರ್ ಭೇಟಿ ನೀಡಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸ್ವಚ್ಛತೆ ಕಾಪಾಡದಿದ್ದಕ್ಕೆ ಅಲ್ಲಿನ ಸಿಬ್ಬಂದಿಗೆ ಕ್ಲಾಸ್ ತೆಗೆದುಕೊಂಡರು. ಮದುವೆ ಊಟಕ್ಕೆ ಹೋದವರು ದಿಢೀರ್ ನೆ ಬನಶಂಕರಿ ಪೊಲೀಸ್ ಠಾಣೆಗೆ ಭೇಟಿ ನೀಡಿದ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಪೊಲೀಸ್ ಠಾಣೆ ಮುಂದೆ ಸ್ವಚ್ಛತೆ ಕಾಪಾಡದಿದ್ದಕ್ಕೆ ಪೊಲೀಸ್ ಸಿಬ್ಬಂದಿಗೆ ತರಾಟೆ ತೆಗೆದುಕೊಂಡರು. ಅಲ್ಲದೆ ಸ್ವಚ್ಛತೆ ಕಾಪಾಡದಿದ್ದರೇ ಸಸ್ಪೆಂಡ್ ಮಾಡುವ ಎಚ್ಚರಿಕೆ ನೀಡಿದರು. ಯಾವ ಕ್ಷಣದಲ್ಲಾದರೂ ನಾನು ಭೇಟಿ ನೀಡುತ್ತೇನೆ. ಹೀಗಾಗಿ 15 ದಿನಗಳಲ್ಲಿ ಎಲ್ಲಾ ಠಾಣೆಗಳನ್ನ ಸ್ವಚ್ಛವಾಗಿಡಬೇಕು. ನಾನು ಭೇಟಿ ನೀಡಿದ್ದ ವೇಳೆ ಸ್ವಚ್ಛತೆ ಇಲ್ಲದಿದ್ದರೇ ಸಿಬ್ಬಂದಿಗಳನ್ನ ಅಮಾನತು ಮಾಡುವುದಾಗಿ ವಾಕಿಟಾಕಿ ಮೂಲಕ ಎಲ್ಲಾ ಪೊಲೀಸ್ ಠಾಣೆಗಳಿಗೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ವಾರ್ನಿಂಗ್ ಕೊಟ್ಟರು. : - - - - - – -.