ಟೆಸ್ಟ್ ಕ್ರಿಕೆಟ್: ಬಾಂಗ್ಲಾ ವಿರುದ್ಧ ಅಫ್ಘಾನಿಸ್ಥಾನಕ್ಕೆ ಭರ್ಜರಿ ಜಯ ಚಿತ್ತಗಾಂಗ್‌, 10, 2019 (..):ಆತಿಥೇಯ ಬಾಂಗ್ಲಾದೇಶದ ವಿರುದ್ಧ ಅಫ್ಘಾನಿಸ್ಥಾನ ತಂಡ ಭರ್ಜರಿ ಜಯ ದಾಖಲಿಸಿದೆ. ಬಾಂಗ್ಲಾದೇಶವನ್ನು 224 ರನ್ನುಗಳ ಭರ್ಜರಿ ಅಂತರದಿಂದ ಬಗ್ಗುಬಡಿದ ಅಫ್ಘಾನಿಸ್ಥಾನ ತನ್ನ ಟೆಸ್ಟ್‌ ಇತಿಹಾಸದ ಅಮೋಘ ಹಾಗೂ ಸ್ಮರಣೀಯ ಜಯವನ್ನು ದಾಖಲಿಸಿದೆ. ಗೆಲುವಿಗೆ 398 ರನ್‌ ಗುರಿ ಪಡೆದ ಬಾಂಗ್ಲಾದೇಶ, ಅಂತಿಮ ದಿನವಾದ ಸೋಮವಾರ 173ಕ್ಕೆ ಸರ್ವಪತನ ಕಂಡಿತು.