ಮೈಸೂರು ದಸರಾ: ಆನೆಗಳಂತೆ ಅಶ್ವಗಳಿಗೂ ರಿಹರ್ಸಲ್…. ಮೈಸೂರು,ಸೆ,9,2019(..): ಮೈಸೂರು ದಸರಾ ಮಹೋತ್ಸವ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ಆನೆಗಳ ಜೊತೆ ಅಶ್ವಗಳಿಗೂ ಇಂದಿನಿಂದ ತಾಲೀಮು ಆರಂಭವಾಗಿದೆ. ಆನೆಗಳ ನಡುವಿನ ಭಯವನ್ನ ಹೋಗಲಾಡಿಸಲು ಆನೆಗಳ ಬಳಿ ಕುದುರೆಗಳನ್ನ ಕರೆದುಕೊಂಡು ಬಂದ ಅಶ್ವರೋಹಿ ಪಡೆ ಅಶ್ವಗಳಿಗೂ ತಾಲೀಮು ನಡೆಸಿದರು. ಈ ಮೂಲಕ ಜಂಬೂ ಸವಾರಿಯಲ್ಲಿ ಜಂಬೂಸವಾರಿಯಲ್ಲಿ ಭಾಗಿಯಾಗುವ ಕುದುರೆಗಳಿಗೆ ಆನೆಗಳ ವಾಸನೆ ಪರಿಚಯಿಸಲಾಯಿತು. ಕ್ಯಾಪ್ಟನ್ ಅರ್ಜುನ ಸೊಂಡಿಲೆತ್ತಿ ಕುದುರೆಗಳಿಗೆ ಆಶೀರ್ವಾದ ಮಾಡಿದನು. : – - - - -….