ತುಳು ಭಾಷೆಗೆ ಅಧಿಕೃತ ಸ್ಥಾನ ಮಾನ: ದನಿಗೂಡಿಸಿದ ಹ್ಯಾಟ್ರಿಕ್ ಹೀರೋ ಬೆಂಗಳೂರು, 10, 2019 (..):ತುಳು ಭಾಷಿಕರ ಬಹುಕಾಲದ ಬೇಡಿಕೆಗೆ ಈಡೇರಿಕೆಗೆ ನಟ ಶಿವರಾಜ್ ಕುಮಾರ್ ದನಿಗೂಡಿಸಿದ್ದಾರೆ. ತುಳು ಭಾಷೆಗೆ ಅಧಿಕೃತ ಸ್ಥಾನ ಮಾನ ನೀಡಬೇಕೆಂಬುದು ತುಳು ಭಾಷಿಕರ ಬಹುದಿನಗಳ ಬೇಡಿಕೆಯಾಗಿದೆ. ಈ ಬೇಡಿಕೆಗೆ ಈಗ ಶಿವರಾಜ್ ಕುಮಾರ್ ಧ್ವನಿಗೂಡಿಸಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಸಂದೇಶ ಪ್ರಕಟಿಸಿರುವ ಶಿವಣ್ಣ ತುಳುಭಾಷೆಗೆ ಅಧಿಕೃತ ಸ್ಥಾನ ಮಾನ ನೀಡುವುದಕ್ಕೆ ನನ್ನ ಬೆಂಬಲವಿದೆ. ತುಳುವರ ಈ ಬೇಡಿಕೆ ಶೀಘ್ರದಲ್ಲೇ ನೆರವೇರಲಿ ಎಂದು ಆಶಿಸಿದ್ದಾರೆ.