ಕಣ್ಣಲ್ಲಿ ನೀರು ತರಿಸುವ ಎಲ್.ಎನ್.ಶಾಸ್ತ್ರಿ ಕೊನೆಯ ಹಾಡು ! ಬೆಂಗಳೂರು, ಸೆಪ್ಟೆಂಬರ್ 09, 2019 (..):ಗಾಯಕ ಎಲ್ ಶಾಸ್ತ್ರಿ ಕಂಪೋಸ್​ ಮಾಡಿ ಹಾಡಿರುವ ಕಟ್ಟ ಕಡೆಯ ಹಾಡು ಬಿಡುಗಡೆಯಾಗಿದೆ. ಎಲ್​. ಎನ್​ ಶಾಸ್ತ್ರಿ ತಮ್ಮ ಕೊನೆ ದಿನಗಳಲ್ಲಿ ನೀರು ತುಂಬಿದ ನೋವಿನ ಹೊಟ್ಟೆಯನ್ನು ಹೊತ್ತುಕೊಂಡೇ ಸ್ಟುಡಿಯೋಗೆ ಬಂದು ಈ ಹಾಡನ್ನ ಕಂಪೋಸ್​ ಮಾಡಿ ಹಾಡಿದ್ದರು. ತಮ್ಮದೇ ನೋವಿನ ಕಥೆ ಹೇಳುವಂತಿದ್ದ ಹಾಡು, ನಿಜಕ್ಕೂ ಎಂಥವರನ್ನೂ ಕಾಡದೇ ಇರಲ್ಲ. ಆ ಹಾಡಿನ ಲಿರಿಕಲ್​ ವೀಡಿಯೋ ಇದೀಗ ರಿಲೀಸ್​ ಆಗಿದೆ. ಮೇಲೊಬ್ಬ ಮೇದಾವಿ ಚಿತ್ರದ ಹಾಡು ಎಲ್ಲರ ಮನ ಸೆಳೆಯುತ್ತಿದೆ.