ಕ್ರೂಸರ್ ಡಿಕ್ಕಿ: ಬೈಕ್ ನಲ್ಲಿ ತೆರಳುತ್ತಿದ್ದ ಮೂವರು ಸ್ಥಳದಲ್ಲೇ ಸಾವು ಧಾರವಾಡ,ಸೆ,6,2019(..): ಕ್ರೂಸರ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಬೈಕ್ ನಲ್ಲಿದ್ದ ಮೂವರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಧಾರವಾಡ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ನವಲಗುಂದ ತಾಲೂಕು ಅಳಗವಾಡಿ ಬಳಿ ಈ ಘಟನೆ ನಡೆದಿದೆ. ಮಹಾಂತೇಶ ನಿಂಗಪ್ಪ ಗುಜ್ಜಳ (26), ಚಂದ್ರಗೌಡ ಶಿವನಗೌಡ ರಾಯನಗೌಡ (28) ಹಾಗೂ ಹೆಬ್ಬಾಳ ಗ್ರಾಮದ ಆನಂದ ನಿಂಗಪ್ಪ ಜೆಟ್ಟೆನವರ (26) ಮೃತಪಟ್ಟ ಯುವಕರು. ಬೈಕ್ ಕ್ರೂಸರ್ ಡಿಕ್ಕಿಯಾಗಿ ಈ ಘಟನೆ ಸಂಭವಿಸಿದೆ. ಸ್ಥಳಕ್ಕೆ ನವಲಗುಂದ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. : –- - –