ಇಂದು ಸಂಜೆ ಟ್ವಿಟ್ಟರ್’ನಲ್ಲಿ ಸುದೀಪ್ ಬೆಂಗಳೂರು, ಸೆಪ್ಟೆಂಬರ್ 07, 2019 (..): ಕಿಚ್ಚ ಸದೀಪ್ ಅಭಿಮಾನಿಗಳಿಗಾಗಿ ಇಂದು ಸಂಜೆ ಟ್ವಿಟರ್​ನಲ್ಲಿ ಲೈವ್​ ಬರಲಿದ್ದಾರೆ. ಅಭಿಮಾನಿಗಳು ಅವರಿಗೆ ಬೇಕಾದ ಪ್ರಶ್ನೆಗಳನ್ನು ಕೇಳಬಹುದು. ಎಲ್ಲ ಪ್ರಶ್ನೆಗಳಿಗೆ ಸುದೀಪ್​ ಉತ್ತರಿಸಲಿದ್ದಾರೆ. ಅಂದಹಾಗೆ ಸುದೀಪ್​ ಅಭಿಮಾನಿಗಳಿಗೆ ಸಾಮಾಜಿಕ ಜಾಲತಾಣದ ಮೂಲಕ ಆಗಾಗ ಸಿಹಿ ಸುದ್ದಿಗಳನ್ನು ನೀಡುತ್ತಿರುತ್ತಾರೆ. ಸಾಮಾಜಿಕ ಜಾಲತಾಣದ ಮೂಲಕ ಎಷ್ಟು ಸಾಧ್ಯವೋ ಅಷ್ಟು ಅಭಿಮಾನಿಗಳಿಗೆ ಹತ್ತಿರವಾಗಲು ಪ್ರಯತ್ನಿಸುತ್ತಾರೆ.