ದಾರಿ ತಪ್ಪಿ ಆಸ್ಪತ್ರೆಗೆ ನುಗ್ಗಿದ ಉಡಾ ನೋಡಿ ಗಾಬರಿಗೊಂಡ ಸಿಬ್ಬಂದಿ …. ಮೈಸೂರು,ಸೆ,3,2019(..): ಮೈಸೂರಿನ ಪಂಚಕರ್ಮ ಹೈಟೆಕ್ ಆಸ್ಪತ್ರೆಗೆ ನುಗ್ಗಿದ್ದ ಉಡಾವನ್ನ ಉರಗ ತಜ್ಞ ಕೀರ್ತಿ ಸೂರ್ಯ ಎಂಬುವವರು ರಕ್ಷಣೆ ಮಾಡಿ ಚಾಮುಂಡಿ ಬೆಟ್ಟಕ್ಕೆ ಬಿಟ್ಟಿದ್ದಾರೆ. ದಾರಿ ತಪ್ಪಿ ಬಂದ ಉಡಾ ಮೈಸೂರು ಕೆ.ಆರ್.ಎಸ್. ರಸ್ತೆಯಲ್ಲಿ ಇರುವ ಪಂಚಕರ್ಮ ಹೈಟೆಕ್ ಆಸ್ಪತ್ರೆ ನುಗಿತ್ತು. ಆಸ್ಪತ್ರೆ ಶುಚಿಗೊಳಿಸುವ ಸಂದರ್ಭದಲ್ಲಿ ಉಡಾ ಕಾಣಿಸೊಕೊಂಡಿದ್ದು ಈ ವೇಳೆ ಅಲ್ಲಿದ್ದ ಸಿಬ್ಬಂದಿಗಳು ಕೆಲ ಕಾಲ ಗಾಬರಿಗೊಂಡರು. ನಂತರ ಉರಗ ತಜ್ಞ ಸೂರ್ಯ ಕೀರ್ತಿ ಅವರಿಗೆ ಆಸ್ಪತ್ರೆಯ ಸಿಬ್ಬಂದಿಗಳು ಕರೆ ಮಾಡಿ ಮಾಹಿತಿ ನೀಡಿದರು. ಬಳಿಕ ಸ್ಥಳಕ್ಕೆ ಆಗಮಿಸಿದ ಉರಗ ತಜ್ಞ ಸೂರ್ಯ ಕೀರ್ತಿ, ಸುಮಾರು ೩-೧/೨ ಉದ್ದದ ಉಡಾವನ್ನ ರಕ್ಷಣೆ ಮಾಡಿದ ನಂತರ ಚಾಮುಂಡಿ ಬೆಟ್ಟಕ್ಕೆ ಬಿಟ್ಟು ಬಂದರು. : - –- -