ಬೇಟೆಯಾಡಲು ಬಂದ ಹುಲಿಯನ್ನೇ ಅಟ್ಟಾಡಿಸಿದ ಕರಡಿ…. ಮೈಸೂರು,ಸೆ,3,2019(..): ಬೇಟೆಯಾಡಲು ಬಂದ ಹುಲಿಯನ್ನು ಕರಡಿಯೊಂದು ಅಟ್ಟಾಡಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಈ ಘಟನೆ ನಡೆದಿದೆ. ಕಬಿನಿ ಹಿನ್ನೀರಿನ ಸಫಾರಿ ವಲಯದಲ್ಲಿ ದಮ್ಮನಕಟ್ಟೆ ಅರಣ್ಯ ಪ್ರದೇಶದಿಂದ ಸಫಾರಿಗೆ ಹೋದ ಪ್ರವಾಸಿಗರು ಈ ವಿಡಿಯೋ ಅನ್ನು ವೈರಲ್ ಮಾಡಿದ್ದಾರೆ. ಕಬಿನಿ ಹಿನ್ನೀರು ಪ್ರದೇಶದಲ್ಲಿ ಬೇಟೆಯಾಡಲು ಬಂದ ಹುಲಿಯನ್ನು ನೋಡಿದ ಕರಡಿ ತಕ್ಷಣವೇ ಹುಲಿ ಮೇಲಿಯೇ ದಾಳಿ ಮಾಡಿದೆ. ಕರಡಿ ದಾಳಿ ಮಾಡುತ್ತಿದ್ದಂತೆ ನನಗೆ ದಕ್ಕದ ಬೇಟೆಯೆಂದು ಹುಲಿ ಅಲ್ಲಿಂದ ಕಾಲ್ಕತ್ತಿದೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. : –- – --