ಭಿಕ್ಷುಕಿಯಾಗಿದ್ದ ಗಾಯಕಿಗೆ ಈಗ ಆಫರ್ ಮೇಲೆ ಆಪರ್ ! ಮುಂಬೈ, ಸೆಪ್ಟೆಂಬರ್ 03, 2019 (..): ಬಡ ಗಾಯಕಿ ರಾಣು ಮಂಡಾಲ್​ಗೆ ಆಫರ್​ಗಳ ಸುರಿ ಮಳೆ ಸುರಿಯುತ್ತಿದೆ. ಇತ್ತೀಚೆಗೆ ಖ್ಯಾತ ಸಂಗೀತ ನಿರ್ದೇಶಕ ಹಿಮೇಶ್​ ರೇಶ್ಮಿಯಾ ಅವರ ‘ತೇರಿ ಮೇರಿ ತೇರಿ ಮೇರಿ ತೇರಿ ಮೇರಿ ಕಹಾನಿ..’ ಹಾಡಿಗೆ ಧ್ವನಿ ನೀಡಿದ ರಾಣು ಅವರಿಗೆ ಮತ್ತೊಂದು ಹಾಡಿನ ಆಫರ್​ ಬಂದಿದೆ. ರೈಲ್ವೆ ನಿಲ್ದಾಣದಲ್ಲಿ ಭಿಕ್ಷೆ ಬೇಡುತ್ತಿದ್ದ ರಾಣು ಮಂಡಾಲ್​ ಸಾಮಾಜಿಕ ಜಾಲತಾಣದಲ್ಲಿ ತನ್ನ ಧ್ವನಿಯ ಮೂಲಕ ಗುರುತಿಸಿದ್ದೇ ತಡ, ಅವರ ಅದೃಷ್ಟವೇ ಬದಲಾಯಿತು. ಹಿಮೇಶ್​ ರೇಶ್ಮಿಯಾ ಮೊದಲ ಬಾರಿಗೆ ‘ತೇರಿ ಮೇರಿ ತೇರಿ ಮೇರಿ ತೇರಿ ಮೇರಿ ಕಹಾನಿ… ಹಾಡು ಹಾಡುವ ಅವಕಾಶ ನೀಡಿದ್ದರು. ಇದೀಗ ಹಿಮೇಶ್​ ರೇಶ್ಮಿಯಾ ಮತ್ತೊಂದು ಅವಕಾಶವನ್ನು ರಾಣು ಅವರಿಗೆ ನೀಡಿದ್ದಾರೆ. ರಾಣು ಧ್ವನಿಯಲ್ಲಿ ‘ಆಶಿಕಿ ಮೇ ತೆರಿ’ ಎಂಬ ಹೊಸ ಹಾಡನ್ನು ಹಾಡಿಸಿದ್ದಾರೆ.