ಮತ್ತೆ ವರುಣನ ಆರ್ಭಟ ಜೋರು: ಮರ ರಸ್ತೆಗೆ ಉರುಳಿ ಬಿಸಿಲೆ ಘಾಟ್ ಬಳಿ ಸಂಚಾರ ಸಂಪೂರ್ಣ ಸ್ಥಗಿತ… ಹಾಸನ,ಸೆ,3,2019(..): ಹಾಸನ ಜಿಲ್ಲೆ ಸಕಲೇಶಪುರ ಭಾಗದಲ್ಲಿ ವರುಣನ ಅಬ್ಬರ ಮತ್ತೆ ಜೋರಾಗಿದ್ದು ಬಿಸಿಲೆ ಘಾಟ್ ವ್ಯಾಪ್ತಿಯಲ್ಲಿ ಭಾರಿ ಮಳೆಯಿಂದ ಮರ ರಸ್ತೆಗೆ ಉರುಳಿ ಸಂಚಾರ ಸ್ಥಗಿತಗೊಂಡಿದೆ. ರಾತ್ರಿಯಿಂದಲೂ ಬಿಸಿಲೆ ಘಾಟ್ ಮಾರ್ಗದ ಸಂಚಾರ ಸಂಪೂರ್ಣ ಸ್ಥಗಿತವಾಗಿದ್ದು, ನೂರಾರು ಜನರು ನಡು ರಸ್ತೆಯಲ್ಲಿ ಸಿಲುಕಿ ರಾತ್ರಿಯಿಡಿ ಪರದಾಟ ನಡೆಸುತ್ತಿದ್ದಾರೆ. ಭಾರಿ ಮಳೆಯಿಂದ ನಿನ್ನೆ ರಾತ್ರಿ ಮರ ಉರುಳಿ ಈ ಅವಾಂತರ ಸೃಷ್ಠಿಯಾಗಿದ್ದು, ಬೆಳಿಗ್ಗೆಯಾದರೂ ಮರ ತೆರವು ಮಾಡದ ಹಿನ್ನೆಲೆಯಲ್ಲಿ ನೂರಾರು ವಾಹನಗಳು ಸಾಲುಗಟ್ಟಿ ನಿಂತಿವೆ. ಬಿಸಿಲೆ ಮೂಲಕ ಸುಬ್ರಹ್ಮಣ್ಯ ಮಂಗಳೂರಿಗೆ ತೆರಳುವ ಮಾರ್ಗದಲ್ಲಿ ಸಂಚಾರ ಅಸ್ತವ್ಯಸ್ತವಾಗಿದ್ದು, ನಿನ್ನೆಯಿಂದಲೂ ಸುರಿಯುತ್ತಿರುವ ಮಳೆಯಿಂದ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇನ್ನು ಸಮಸ್ಯೆಗೆ ಸ್ಪಂದಿಸದ ಅಧಿಕಾರಿಗಳ ವಿರುದ್ದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. : –--- -