ಈಗಲೇ ಟೈಂ ಕೊಟ್ರೆ ಇಡಿ ಮುಂದೆ ಹಾಜರಾಗುವೆ-ನವದೆಹಲಿಯಲ್ಲಿ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಹೇಳಿಕೆ… ನವದೆಹಲಿ,ಆ,30,2019(..) ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿರುವ ಹಿನ್ನೆಲೆ, ಈಗಲೇ ಸಮಯ ನೀಡಿದರೇ ವಿಚಾರಣೆಗೆ ಹಾಜರಾಗುತ್ತೇನೆ ಎಂದು ಮಾಜಿ ಸಚಿವ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ. ಐಟಿ ದಾಳಿ ವೇಳೆ ದೆಹಲಿ ನಿವಾಸದಲ್ಲಿ ಹಣ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಗೆ ಇಡಿ ಸಮನ್ಸ್ ನೀಡಿದ್ದು ಈ ಹಿನ್ನೆಲೆ ಇಂದು ಡಿ.ಕೆ ಶಿವಕುಮಾರ್ ದೆಹಲಿಗೆ ತಲುಪಿದ್ದು ಇಡಿ ಮುಂದೆ ಹಾಜರಾಗಲಿದ್ದಾರೆ. ಈ ಬಗ್ಗೆ ನವದೆಹಲಿ ಏರ್ ಪೋರ್ಟ್ ಬಳಿ ಮಾಧ್ಯಮದ ಜತೆ ಮಾತನಾಡಿದ ಡಿ.ಕೆ ಶಿವಕುಮಾರ್, ಇಡಿಯಿಂದ ಸಮನ್ಸ್ ಬಂದಿದೆ.ಈಗಷ್ಟೆ ದೆಹಲಿಗೆ ಲ್ಯಾಂಡ್ ಆಗಿದ್ದೀನಿ. ಈಗಲೇ ಸಮಯ ನೀಡಿದರೇ ವಿಚಾರಣೆಗೆ ಹಾಜರಾಗುವೆ ಎಂದರು. ಹಾಗೆಯೇ ಇಡಿ ವಿಚಾರಣೆಗೆ ಎಲ್ಲಾ ರೀತಿಯ ಸಹಕಾರ ನೀಡಲು ಸಿದ್ಧನಿದ್ದೇನೆ. ನಾನು ಎಲ್ಲೂ ಓಡಿ ಹೋಗಿಲ್ಲ ಇಡಿ ಅಧಿಕಾರಿಗಳ ಫೋನ್ ನಂಬರ್ ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದರು. : - - --