ಟೆಸ್ಟ್ ಕ್ರಿಕೆಟ್: ಇಂದು ವಿಂಡೀಸ್ ವಿರುದ್ಧ ಟೀಂ ಇಂಡಿಯಾ ಹೋರಾಟ ಬೆಂಗಳೂರು, ಆಗಸ್ಟ್ 30, 2019 (..):ವೆಸ್ಟ್​ ಇಂಡೀಸ್ ಪ್ರವಾದಲ್ಲಿರುವ ಭಾರತ ಇಂದಿನಿಂದ ಅಂತಿಮ ಎರಡನೇ ಟೆಸ್ಟ್​ ಪಂದ್ಯವನ್ನು ಆಡಲಿದೆ. ಈಗಾಗಲೇ ಮೊದಲ ಟೆಸ್ಟ್​ ಗೆದ್ದಿರುವ ಕೊಹ್ಲಿ ಪಡೆ, ಈ ಪಂದ್ಯವನ್ನೂ ಗೆದ್ದು ಸರಣಿ ಕ್ಲೀನ್ ಸ್ವೀಪ್ ಮಾಡುವ ಯೋಜನೆ ಹಾಕಿಕೊಂಡಿದೆ. ಟೀಂ ಇಂಡಿಯಾದಲ್ಲಿ ಬಹುತೇಕ ಕಳೆದ ಗೆಲುವಿನ ತಂಡದ ಆಟಗಾರರೇ 2ನೇ ಟೆಸ್ಟ್​ನಲ್ಲು ಇಳಿಯುವ ಅಂದಾಜಿನಲ್ಲಿದೆ. ಎಲ್ಲಾದರು ಬದಲಾವಣೆ ಆದಲ್ಲಿ ಆರ್. ಅಶ್ವಿನ್ ತಂಡ ಸೇರಿಕೊಳ್ಳಬಹುದು. ಹಾಗಾದಲ್ಲಿ ಯಾವ ಆಟಗಾರರು ಹೊರಗುಳಿಯುತ್ತಾನೆ ಎಂಬುದು ಕುತೂಹಲ.